ಮಂಗಳೂರು: ಜಗತ್ತಿಗೆ ಒಳಿತನ್ನು ಬಯಸುವ ಸಂಸ್ಕೃತಿ ಅದು ಹಿಂದೂ ಸಂಸ್ಕೃತಿ. ಆ ಸಂಸ್ಕೃತಿಯ ವಾರಸುದಾರರು ನಾವೆಲ್ಲರೂ, ಅದರ ಸಂರಕ್ಷಣೆ ಹಾಗೂ ಉನ್ನತಿ ಪ್ರತಿ ಹಿಂದುವಿನ ಆದ್ಯ ಕರ್ತವ್ಯ ಎಂದು ಅಖಿಲ ಭಾರತೀಯ ಪ್ರಜ್ಞಾ ಪ್ರವಾಹ ಸಹ ಸಂಯೋಜಕ ಶ್ರೀ ರಘುನಂದನವರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಚೈತ್ರ ಶುದ್ಧ ಪಾಡ್ಯ ಶ್ರೀ ಕ್ರೋಧಿ ಸಂವತ್ಸರದ ಯುಗಾದಿ ಉತ್ಸವವು ನಗರದ ಉರ್ವ ಕ್ರಿಕೆಟ್ ಮೈದಾನದಲ್ಲಿ ಜರುಗಿತ್ತು.
ಸನಾತನವಾದ ಹಿಂದೂ ಸಂಸ್ಕೃತಿ ಹಲವಾರು ಕಾಲಘಟ್ಟಗಳಲ್ಲಿ ತನ್ನನ್ನು ಸವಾಲುಗಳಿಗೊಡ್ಡಿ ಇಂದಿಗೂ ಜಗತ್ತಿನ ಅತಿ ಶ್ರೇಷ್ಠ ಸಂಸ್ಕೃತಿಯಾಗಿ ಉಳಿದುಕೊಂಡಿದೆ. ಈ ಸಂಸ್ಕೃತಿಯ ತವರು ಭಾರತ, ಇದರ ರಕ್ಷಣೆಗೆ ಸದೃಢ ಭಾರತದ ಅಗತ್ಯವಿದೆ. ಹಿಂದೂ ಸಂಘಟನೆಯಿಂದ ಮಾತ್ರ ಇದು ಸಾಧ್ಯ ಹಾಗಾಗಿ ಪ್ರತಿ ಸ್ವಯಂಸೇವಕರು ಪ್ರತಿನಿತ್ಯ ರಾಷ್ಟ್ರ ಕಾರ್ಯದ ಪ್ರತಿಜ್ಞೆಯೊಂದಿಗೆ ಸಮಾಜವನ್ನು ಏಕರಾಶಿಯನ್ನಾಗಿಸಿ ಸಮಾಜದ ನಡುವೆ ಸಂಘ ಕಾರ್ಯವನ್ನು ಮಾಡುವುದನ್ನು ನಾವು ಕಾಣುತ್ತೇವೆ.ಹಿಂದೂ ಸಮಾಜದ ಮೂಲಾಧಾರ ನಮ್ಮ ಮನೆ, ನಮ್ಮ ಮನೆಯನ್ನು ಶಕ್ತಿವಂತಾಗಿಸಿ ಸಮಾಜಕ್ಕೆ ಶಕ್ತಿ ನೀಡುವ ಹಾಗೆ ಆಗಲಿ ಎಂದು ಶ್ರೀ ರಘುನಂದನ ಹೇಳಿದರು.
ಯುಗಾದಿ ಉತ್ಸವದ ಹೊಸ ವರ್ಷದ ಸಂಭ್ರಮದ ಜೊತೆಗೆ ರಾಷ್ಟ್ರಿಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡಗೆವಾರ್ ಇವರ ಜನ್ಮದಿನವೂ ಕೂಡ. ಅವರ ಜೀವನದ ಪ್ರೇರಣೆಯೊಂದಿಗೆ ಸ್ವಯಂಸೇವಕರು ರಾಷ್ಟ್ರ ಕಾರ್ಯಕ್ಕೆ ಇನ್ನಷ್ಟು ಸಮಯ ಮೀಸಲಿಡುವ ಅಗತ್ಯವಿದೆಯೆಂದು ಅವರು ಮಾರ್ಗದರ್ಶನ ಮಾಡಿದರು.
ದಕ್ಷಿಣ ಮಧ್ಯ ಕ್ಷೇತ್ರದ ಮಾನ್ಯ ಸಂಘ ಚಾಲಕರಾದ ಡಾ। ವಾಮನ್ ಶೆಣೈ ಹಾಗೂ ಮಂಗಳೂರು ಮಹಾನಗರದ ಮಾನ್ಯ ಸಂಘ ಚಾಲಕರಾದ ಡಾ। ಸತೀಶ್ ರಾವ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.