ನವದೆಹಲಿ: ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ತಮ್ಮ ಪತಿಯನ್ನು ಬೆಂಬಲಿಸಲು ವಾಟ್ಸಾಪ್ ಸಂಖ್ಯೆ ಮೂಲಕ ಸಂದೇಶ ನೀಡುವಂತೆ ನೀಡಿದ ಕರೆ ಇದೀಗ ಅವರ ಪಕ್ಷಕ್ಕೆಯೇ ತಿರುಮಂತ್ರವಾಗಿದೆ.
ವಾಟ್ಸಾಪ್ ಸಂದೇಶದ ಮೂಲಕ ಪತಿಯನ್ನು ಬೆಂಬಲಿಸಿದ ಎಂದು ವೀಡಿಯೊ ಸಂದೇಶದಲ್ಲಿ ಸುನೀತ ಕೇಜ್ರಿವಾಲ್ ಅವರು ಜನರನ್ನು ಒತ್ತಾಯಿಸಿದ ಕೆಲವೇ ಗಂಟೆಗಳ ನಂತರ ಆ ವಾಟ್ಸಾಪ್ ಸಂಖ್ಯೆಯನ್ನೇ ಡಿಲೀಟ್ ಮಾಡಲಾಗಿದೆ. ಕೇಜ್ರಿವಾಲ್ ಅವರನ್ನು ಬೆಂಬಲಿಸುವ ಬದಲು ಅವರ ರಾಜೀನಾಮೆಗೆ ಆಗ್ರಹಗಳೇ ಬರುತ್ತಿದ್ದ ಹಿನ್ನೆಲೆಯಲ್ಲಿ ವಾಟ್ಸಾಪ್ ಸಂಖ್ಯೆಯನ್ನು ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಎಎಪಿ ವಾಟ್ಸಾಪ್ ಸಂಖ್ಯೆಯನ್ನು ಅಳಿಸಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೇಜ್ರಿವಾಲ್ ಅವರ ರಾಜೀನಾಮೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒತ್ತಾಯಿಸಿದ ಕಾರಣದಿಂದ ಈ ಕ್ರಮವು ತೆಗೆದುಕೊಳ್ಳಲಾಗಿದೆ.
“ ದೆಹಲಿ ಮತ್ತು ಭಾರತದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿದ್ದರಿಂದ ಶ್ರೀಮತಿ ಸುನೀತಾ ಕೇಜ್ರಿವಾಲ್ ನೀಡಿದ ವಾಟ್ಸಾಪ್ ಸಂಖ್ಯೆಯನ್ನು ಕೆಲವೇ ಗಂಟೆಗಳಲ್ಲಿ ಅಳಿಸಲಾಗಿದೆ ಎಂದು ಎಎಪಿಯ ನನ್ನ ಮೂಲಗಳು ತಿಳಿಸಿವೆ” ಎಂದಿದ್ದಾರೆ.
ಫೋನ್ ಸಂಖ್ಯೆ 8297324624 ಇನ್ನು ಮುಂದೆ ಲಭ್ಯವಿಲ್ಲ ಎಂದು ಸೂಚಿಸುವ ಫೋಟೋವನ್ನು ಪೂನಾವಲ್ಲ X ನಲ್ಲಿ ಹಂಚಿಕೊಂಡಿದ್ದಾರೆ.
My source in AAP tells me that the whatsapp number issued by Mrs Sunita Kejriwal was deleted in few hours as people of Delhi & Bharat demanded Kejriwal’s resignation in overwhelming numbers
Is that true AAP? Why are you going against court of law & public opinion & running… pic.twitter.com/JyEhdKilK7
— Shehzad Jai Hind (Modi Ka Parivar) (@Shehzad_Ind) March 29, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.