ನವದೆಹಲಿ: ಮಧ್ಯಪ್ರದೇಶ ಹೈಕೋರ್ಟ್ ಆದೇಶದ ಅನ್ವಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಶುಕ್ರವಾರ ಧಾರ್ನಲ್ಲಿರುವ ಭೋಜಶಾಲಾ ದೇವಸ್ಥಾನ-ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ಇಂದು ಆರಂಭಿಸಿದೆ. ನಿನ್ನೆ ಸಂಜೆ 6:30ರ ಸುಮಾರಿಗೆ ಎಎಸ್ಐ ತಂಡ ಇಲ್ಲಿಗೆ ಆಗಮಿಸಿದೆ ಎಂದು ಮೂಲಗಳು ತಿಳಿಸಿವೆ.
ವಿವಾದಿತ ಸಂಕೀರ್ಣದ 50 ಮೀಟರ್ ಪ್ರದೇಶವನ್ನು ಸಮೀಕ್ಷೆ ಮಾಡಲು ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ನೀಡಿದ ಹಿನ್ನೆಲೆಯಲ್ಲಿ ಎಎಸ್ಐ ನಡೆಸುತ್ತಿದೆ. ಭಾರೀ ಬಿಗಿ ಭದ್ರತೆಯಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.
ಹಿಂದೂಗಳು ಭೋಜಶಾಲಾವನ್ನು ‘ವಾಗ್ದೇವಿ’ಗೆ ಸಮರ್ಪಿತವಾದ ಪವಿತ್ರ ಸ್ಥಳವೆಂದು ಪರಿಗಣಿಸಿದರೆ, ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಗುರುತಿಸುತ್ತಾರೆ. ಅಸ್ತಿತ್ವದಲ್ಲಿರುವ ಗೊಂದಲವನ್ನು ಹೋಗಲಾಡಿಸಲು ಸಂಕೀರ್ಣದ ನೈಜ ಸ್ವರೂಪವನ್ನು ಬಹಿರಂಗಪಡಿಸುವ ಮತ್ತು ಸ್ಪಷ್ಟಪಡಿಸುವ ಪ್ರಾಮುಖ್ಯತೆಯನ್ನು ನ್ಯಾಯಾಲಯವು ಒತ್ತಿಹೇಳಿದೆ.
ಪರಿಶೀಲನೆಯ ನಂತರ, ಸಮೀಕ್ಷೆಯ ನೀಲನಕ್ಷೆಯನ್ನು ರಚಿಸಲಾಗುತ್ತದೆ. ‘ಭೋಜಶಾಲಾ’ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ, ಸಮೀಕ್ಷೆಯ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಧಾರ್ ಜಿಲ್ಲೆಯ ಭೋಜಶಾಲಾ ದೇವಸ್ಥಾನ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ಆರು ವಾರಗಳಲ್ಲಿ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನ ನೀಡಿದೆ. 2003 ರ ಒಪ್ಪಂದದ ಪ್ರಕಾರ, ಹಿಂದೂಗಳು ಮಂಗಳವಾರದಂದು ಸಂಕೀರ್ಣದಲ್ಲಿ ಪೂಜೆ ಮಾಡುತ್ತಾರೆ, ಮುಸ್ಲಿಮರು ಶುಕ್ರವಾರದಂದು ನಮಾಜ್ ಮಾಡುತ್ತಾರೆ.
#WATCH | Madhya Pradesh: ASI (Archaeological Survey of India) team arrives to survey Bhojshala in Dhar after the order of the High Court. pic.twitter.com/52WD9Nx9g0
— ANI (@ANI) March 22, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.