ನವದೆಹಲಿ: ಭಾರತದ ಬಾಸ್ಮತಿ ಅಕ್ಕಿಗಳ ರಫ್ತುಗಳು ಹೊಸ ಎತ್ತರವನ್ನು ತಲುಪಲು ಸಿದ್ಧವಾಗಿದ್ದರೂ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) ಯ ವಿಜ್ಞಾನಿಗಳು ಪಾಕಿಸ್ತಾನದಲ್ಲಿ ಅದರ ಬ್ಲಾಕ್ಬಸ್ಟರ್ ಪ್ರಭೇದಗಳ “ಅಕ್ರಮ” ಕೃಷಿ ನಡೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಐಎಆರ್ ಐ ನಿರ್ದೇಶಕ ಎ.ಕೆ ಸಿಂಗ್ ಅವರು, ಪಾಕಿಸ್ತಾನದ ನಿರ್ಲಜ್ಜ ಬೀಜ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸುವಂತೆ ಮತ್ತು ನಮ್ಮ ರೈತರು ಮತ್ತು ರಫ್ತುದಾರರ ಹಿತಾಸಕ್ತಿಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.
ಅವರ ಪ್ರಕಾರ, ಪಾಕಿಸ್ತಾನದಲ್ಲಿ ಭಾರತದ ತಳಿಯನ್ನು ನಕಲು ಮಾಡಿ ಕೃಷಿ ಮಾಡಲಾಗುತ್ತಿದೆ ಮತ್ತು ಅದನ್ನು ಮರು ನಾಮಕರಣ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ಪಾಕಿಸ್ಥಾನದಲ್ಲಿ ಅಕ್ರಮ ಬೀಜ ಮಾರಾಟ ಮತ್ತು IARI ತಳಿಗಳ ಕೃಷಿಯು ಪೂಸಾ ಬಾಸ್ಮತಿ-1121 (PB-1121) ನಿಂದ ಪ್ರಾರಂಭವಾಗಿದ್ದು, 2003 ರಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಬಾಸ್ಮತಿಯ ಈ ವಿಧವನ್ನು ಪಾಕಿಸ್ತಾನದಲ್ಲಿ ಅಧಿಕೃತವಾಗಿ ‘PK 1121 ಆರೊಮ್ಯಾಟಿಕ್’ ಎಂದು ನೋಂದಾಯಿಸಲಾಗಿದೆ. ಇದನ್ನು ‘1121 ಕೈನಾಟ್’ ಬಾಸ್ಮತಿ ಎಂದು ಸಹ ಮಾರಾಟ ಮಾಡಲಾಗುತ್ತಿದೆ. ಈ ಪದವನ್ನು ಗೂಗಲ್ನಲ್ಲಿ ಹುಡುಕಾಡಿದರೆ ಅದು ಕರಾಚಿ ಮೂಲದ ಲೀಲಾ ಫುಡ್ಸ್ ಮತ್ತು ಲಾಹೋರ್ನ ಲತೀಫ್ ರೈಸ್ ಮಿಲ್ಸ್ (Pvt) 1121 ಕೈನಾಟ್ ಸ್ಟೀಮ್ಡ್ ಬಾಸ್ಮತಿ ಅಕ್ಕಿ ಎಂದು ತೋರಿಸುತ್ತಿರುವುದು ಕಳವಳಕಾರಿಯಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.