ನವದೆಹಲಿ: ಕಪ್ಪುಹಣ ಅಂಗೀಕಾರ ಯೋಜನೆಯಡಿ ಯಾರು ಕ್ಲೀನ್ ಆಗಿ ಹೊರಬಂದಿದ್ದಾರೋ ಅವರು ಚಿಂತೆ ಮಾಡುವ ಅಗತ್ಯವಿಲ್ಲ, ಆದರೆ ಯಾರು ತಮ್ಮ ಲೆಕ್ಕ ಕೊಡದ ಆಸ್ತಿಯೊಂದಿಗೆ ವಿದೇಶದಲ್ಲಿ ವಾಸಿಸುತ್ತಿದ್ದಾರೋ ಅವರು ಕಠಿಣಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ.
’ಈ ಅವಕಾಶವನ್ನು ಬಳಸಿ ದಂಡಕಟ್ಟಿ ತಮ್ಮ ಕಪ್ಪುಹಣವನ್ನು ಯಾರು ಅಧಿಕೃತಗೊಳಿಸಿದ್ದಾರೆ ಅವರು ನೆಮ್ಮದಿಯಿಂದ ನಿದ್ರೆ ಮಾಡಬಹುದು, ಆದರೆ ಇದನ್ನು ಮಾಡದ ದೊಡ್ಡ ಅಥವಾ ಸಣ್ಣ ಮೀನು(ಜನರು) ಖಂಡಿತವಾಗಿಯೂ ಪರಿಣಾಮವನ್ನು ಎದುರಿಸುತ್ತದೆ’ ಎಂದಿದ್ದಾರೆ.
ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು ಕೂಡ ಇದೇ ರೀತಿಯ ಎಚ್ಚರಿಕೆ ನೀಡಿದ್ದು, ಯಾರು ಬಹಿರಂಗಪಡಿಸದ ಆಸ್ತಿಯೊಂದಿಗೆ ವಿದೇಶದಲ್ಲಿ ವಾಸಿಸುತ್ತಿದ್ದಾರೋ ಅಂತವರನ್ನು ತಕ್ಷಣವೇ ಪತ್ತೆ ಹಚ್ಚಲಾಗುವುದು. ಇಂತವರು ಮಾಹಿತಿ ವಿನಿಮಯದ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ಇಲ್ಲವಾದರೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದಿದ್ದಾರೆ.
ಕಾನೂನಿನಡಿ ಕಪ್ಪುಹಣ ಹೊಂದಿದವರು ತಮ್ಮ ಆಸ್ತಿಯ ಶೇ.120ರಷ್ಟು ದಂಡವನ್ನು ಕಟ್ಟಬೇಕಾಗುತ್ತದೆ ಮತ್ತು ಹತ್ತು ಜೈಲನ್ನು ಅನುಭವಿಸಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.