ಬೆಂಗಳೂರು: ಮಹಾತ್ಮ ಗಾಂಧೀಜಿಯವರ 146ನೇ ಜನ್ಮದಿವನ್ನು ಶುಕ್ರವಾರ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಮಕ್ಕಳು ರಾಷ್ಟ್ರಪಿತನ ವೇಷ ತೊಟ್ಟು ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದಾರೆ.
ವೆಂಕಟ್ ಸ್ಟಾಂನ್ಸ್ ಮತ್ತು ವಿನಸ್ ಗ್ರೂಪ್ ಇನ್ಸ್ಟಿಟ್ಯೂಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 4605 ಮಕ್ಕಳು ಗಾಂಧೀಜಿ ಅವರ ವೇಷ ತೊಟ್ಟು ಭಾಗವಹಿಸಿದ್ದರು, ಇಷ್ಟು ಸಂಖ್ಯೆಯಲ್ಲಿ ಗಾಂಧಿ ವೇಷಧಾರಿಗಳು ಒಂದು ಸಮಾರಂಭದಲ್ಲಿ ನೆರೆದಿದ್ದು ಇದೇ ಮೊದಲು. ಹೀಗಾಗಿ ಇದು ಗಿನ್ನಿಸ್ ದಾಖಲೆಯ ಪುಟವನ್ನು ಸೇರಿದೆ.
ನಿನ್ನೆ ದೇಶದಲ್ಲಿ ಗಾಂಧಿ ಜಯಂತಿಯ ಹಿನ್ನಲೆಯಲ್ಲಿ ಹಲವಾರು ಸಭೆ, ಸಮಾರಂಭಗಳನ್ನು ಏರ್ಪಡಿಸಲಾಗಿತ್ತು, ಪ್ರಧಾನಿ, ರಾಷ್ಟ್ರಪತಿಗಳು ಸೇರಿದಂತೆ ಹಲವಾರು ಗಣ್ಯರು ರಾಷ್ಟ್ರಪಿತನಿಗೆ ಗೌರವಗಳನ್ನು ಸಲ್ಲಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.