ನವದೆಹಲಿ: ಮಿಜೋರಾಂನ ಸೈಚುವಲ್ ಎಂಬ ಕುಗ್ರಾಮದ 11 ವರ್ಷ ವಯಸ್ಸಿನ ಸ್ಯಾಮ್ಯುಯೆಲ್ ಲಾಲ್ಬಿಕ್ಲುವಾ ದೇಶದ ಅತ್ಯಂತ ಕಿರಿಯ ಪ್ಯಾರಾಗ್ಲೈಡಿಂಗ್ ಪೈಲಟ್ ಆಗುವ ಮೂಲಕ ಭಾರತೀಯ ವಾಯುಯಾನ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾನೆ.
ಮಾರ್ಚ್ 16 ರಂದು ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್ನ ವಿಶ್ವಪ್ರಸಿದ್ಧ ಪ್ಯಾರಾಗ್ಲೈಡಿಂಗ್ ಸಂಸ್ಥೆಯಲ್ಲಿ ಸ್ಯಾಮ್ಯುಯೆಲ್ ಹಾರಾಟ ನಡೆಸಿದ್ದಾನೆ. ಕೇವಲ ಒಂದು ವಾರದ ಮೊದಲು ತನ್ನ ತರಬೇತಿಯನ್ನು ಪ್ರಾರಂಭಿಸಿದರೂ, ಈ ಯುವ ಪೈಲಟ್ ಅಸಾಧಾರಣ ಕೌಶಲ್ಯ ಮತ್ತು ದೃಢತ್ವವನ್ನು ಪ್ರದರ್ಶಿಸಿದ್ದಾನೆ, ಬಿರ್ ಬಿಲ್ಲಿಂಗ್ನ ಸುಂದರವಾದ ಭೂದೃಶ್ಯಕ್ಕಿಂತ ಎತ್ತರಕ್ಕೆ ಹಾರಿ ಜನರನ್ನು ದಿಗ್ಬ್ರಾಂತಗೊಳಿಸಿದನು.
ಅವನ ಯಶಸ್ವಿ ಏಕವ್ಯಕ್ತಿ ಹಾರಾಟವು ಅವನನ್ನು ಬಿರ್ ಬಿಲ್ಲಿಂಗ್ನ ಆಕಾಶವನ್ನು ಏರಿದ ಯುವ ಏವಿಯೇಟರ್ಗಳ ಗಣ್ಯ ಲೀಗ್ಗೆ ಸೇರಿಸಿತು. ತನ್ನ ವಯಸ್ಸನ್ನು ಮೀರಿ ಈತ ಪ್ಯಾರಾಗ್ಲೈಡಿಂಗ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು P2 ಮಟ್ಟವನ್ನು ಸಾಧಿಸುವ ನಿಟ್ಟಿನಲ್ಲಿ ಗುರಿ ನೆಟ್ಟಿದ್ದಾನೆ.
ಪ್ಯಾರಾಗ್ಲೈಡಿಂಗ್ಗಾಗಿ ಸ್ಯಾಮ್ಯುಯೆಲ್ನ ಆಸಕ್ತಿ 6 ನೇ ವಯಸ್ಸಿನಲ್ಲಿ ಚಿಗುರೊಡೆಯಿತು, ಇದು ಆತನ ಧೈರ್ಯ ಮತ್ತು ಮಹತ್ವಾಕಾಂಕ್ಷೆಯಿಂದ ಉತ್ತೇಜಿತವಾದ ಅಸಾಮಾನ್ಯ ಪ್ರಯಾಣದ ಆರಂಭಕ್ಕೆ ಮುನ್ನುಡಿ ಬರೆಯಿತು. ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತಾ ಆತ 11 ನೇ ವಯಸ್ಸಿನಲ್ಲಿ ಗಮನಾರ್ಹ ಸಾಧನೆಯಲ್ಲಿ ಉತ್ತುಂಗಕ್ಕೇರಿ ಎಲ್ಲರಿಂದ ಭೇಷ್ ಅನಿಸಿಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.