ನವದೆಹಲಿ: ಬಿಹಾರದಲ್ಲಿ ಎನ್ಡಿಎ ತನ್ನ ಸೀಟು ಹಂಚಿಕೆ ಸೂತ್ರವನ್ನು ಔಪಚಾರಿಕವಾಗಿ ಪ್ರಕಟಿಸಿದ್ದು, ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ, ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹಾ ಅವರ ಆರ್ಎಲ್ಎಂ ತಲಾ ಒಂದು ಸ್ಥಾನವನ್ನು ಪಡೆದಿವೆ.
ಚಿರಾಗ್ ಪಾಸ್ವಾನ್ ಅವರ ಚಿಕ್ಕಪ್ಪ ಪಶುಪತಿ ಪರಾಸ್ ನೇತೃತ್ವದ ಎಲ್ಜೆಪಿ ಬಣ ಎನ್ಡಿಎಯಿಂದ ಹೊರ ನಡೆದಿದೆ. ಚಿರಾಗ್ ಪಾಸ್ವಾನ್ ಅವರ ಬಣ ಪರಾಸ್ ಪಾಸ್ವಾನ್ ಮತದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ ಎಂದು ಸ್ಪಷ್ಟವಾದ ನಂತರ ಪರಾಸ್ ಬಣವನ್ನು ಎನ್ಡಿಎಯೀಂದ ಕೈಬಿಡಲಾಯಿತು. ಈ ಸಮುದಾಯವು ಮತದಾನದ ಜನಸಂಖ್ಯೆಯ 6 ಪ್ರತಿಶತವನ್ನು ಒಳಗೊಂಡಿದೆ.
ಬಿಜೆಪಿಯು ಎಲ್ಜೆಪಿಯ ಭದ್ರಕೋಟೆಯಾದ ನಾವಡಾವನ್ನು ತನ್ನ ಬಳಿ ಇರಿಸಿಕೊಂಡಿದೆ. ಕಳೆದ ಬಾರಿ ಕಾಂಗ್ರೆಸ್ನಿಂದ ಸೋತಿದ್ದ ಕಿಶನ್ಗಂಜ್ ಜೆಡಿಯು ಪಾಲಾಗಿದೆ.
ಮಹಾಮೈತ್ರಿಕೂಟವನ್ನು ಎರಡನೇ ಬಾರಿಗೆ ಮುರಿದು ಈ ವರ್ಷದ ಆರಂಭದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿರುವ ನಿತೀಶ್ ಕುಮಾರ್ ಅವರ ಜೆಡಿಯು ತನ್ನ ಸ್ಥಾನಮಾನದ ಬದಲಾವಣೆಯನ್ನು ಸಹಜವಾಘಿಯೇ ಒಪ್ಪಿಕೊಂಡಿದೆ ಎನ್ನಲಾಗಿದೆ. “ಎನ್ಡಿಎ ಎಲ್ಲಾ 40 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಮಗೆ ವಿಶ್ವಾಸವಿದೆ” ಎಂದು ಜನತಾ ದಳ ಯುನೈಟೆಡ್ನ ಸಂಜಯ್ ಝಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.