ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಇದೀಗ ಅಲ್ಲಿ ಕಾರ್ ರೇಸಿಂಗ್ ಕೂಡ ಆಯೋಜಿಸಲ್ಪಡುತ್ತಿದೆ. ಶ್ರೀನಗರವು ವಿಶ್ವಪ್ರಸಿದ್ಧ ದಾಲ್ ಸರೋವರದ ದಡದಲ್ಲಿ ಭಾನುವಾರದಂದು ಮೊದಲ ಬಾರಿಗೆ ಫಾರ್ಮುಲಾ 4 ಕಾರ್ ರೇಸಿಂಗ್ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿತ್ತು. ವೃತ್ತಿಪರ ಫಾರ್ಮುಲಾ 4 ಚಾಲಕರು ಪ್ರದರ್ಶಿಸಿದ ಸಾಹಸಗಳನ್ನು ವೀಕ್ಷಿಸಿದ ಸ್ಥಳೀಯರು ಮತ್ತು ಮೋಟಾರ್ಸ್ಪೋರ್ಟ್ ಅಭಿಮಾನಿಗಳನ್ನು ರೋಮಾಂಚನಗೊಂಡರು.
ನಗರದ ದಾಲ್ ಸರೋವರದ ದಡದಲ್ಲಿರುವ ಲಲಿತ್ ಘಾಟ್ನಿಂದ ನೆಹರೂ ಪಾರ್ಕ್ವರೆಗಿನ 1.7 ಕಿಮೀ ಟ್ರ್ಯಾಕ್ನಲ್ಲಿ ಸ್ಲೀಕ್ ರೇಸಿಂಗ್ ಕಾರುಗಳು ಘರ್ಜಿಸಿದವು. ಕಾರ್ಯಕ್ರಮವನ್ನು ವೀಕ್ಷಿಸಲು ನೂರಾರು ಉತ್ಸಾಹಿ ಯುವಕರು ಜಬರ್ವಾನ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಸುಂದರವಾದ ಬುಲೆವಾರ್ಡ್ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು.
ಸ್ಥಳೀಯ ಅಧಿಕಾರಿಗಳ ಪ್ರಕಾರ, ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಕ್ರೀಡೆಯನ್ನು ವೃತ್ತಿಯ ಆಯ್ಕೆಯಾಗಿ ಪರಿಗಣಿಸಲು ಯುವಕರನ್ನು ಉತ್ತೇಜಿಸಲು ಈವೆಂಟ್ ಅನ್ನು ಆಯೋಜಿಸಲಾಗಿದೆ.
ಕಾಶ್ಮೀರ ಕಣಿವೆಯಲ್ಲಿ ಈ ರೀತಿಯ ಮೊದಲ ಈವೆಂಟ್ ಅನ್ನು ಫೆಡರೇಶನ್ ಆಫ್ ಮೋಟಾರ್ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ ಆಯೋಜಿಸಿದೆ, ಇದು ಫೆಡರೇಶನ್ ಇಂಟರ್ನ್ಯಾಷನಲ್ ಡಿ ಎಲ್ ಆಟೋಮೊಬೈಲ್ (ಎಫ್ಐಎ) ನೊಂದಿಗೆ ಸಂಯೋಜಿತವಾಗಿದೆ.
ಈ ಕಾರ್ಯಕ್ರಮವು ಜಮ್ಮು ಮತ್ತು ಕಾಶ್ಮೀರದ ಸೌಂದರ್ಯವನ್ನು ಮತ್ತಷ್ಟು ಪ್ರದರ್ಶಿಸುತ್ತದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
The first ever Formula-4 car show was held on the banks of the Dal Lake Srinagar today. Here are some visuals from this action packed event! #srinagar #carshow #formula4 #kashmir #dallake @MudgalYasha @diprjk pic.twitter.com/S82FaafQzD
— Jammu & Kashmir Tourism (@JandKTourism) March 17, 2024
This is very heartening to see. It will help further showcase the beauty of Jammu and Kashmir. India offers great opportunities for motorsports to thrive and Srinagar is right on top of the places where it can happen! https://t.co/RNSRy4NnZ3
— Narendra Modi (@narendramodi) March 17, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.