ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸೊಮಾಲಿಯ ಕಡಲ್ಗಳ್ಳರು ಎಂವಿ ರುಯೆನ್ ನೌಕೆಯನ್ನು ಸಮುದ್ರದಲ್ಲಿ ಕಡಲ್ಗಳ್ಳತನಕ್ಕೆ ಬಳಸಿಕೊಳ್ಳುವುದನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ತಡೆದಿದೆಏನಾಯಿತು?
ಹಡಗನ್ನು ಡಿಸೆಂಬರ್ 14, 2023 ರಂದು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದರು. ಮಾಲ್ಟೀಸ್-ಧ್ವಜದ ಬೃಹತ್ ಸರಕು ಹಡಗು ರುಯೆನ್ ಅನ್ನು ಮಾರ್ಚ್ 15 ರಂದು ನೌಕಾಪಡೆಯ ಯುದ್ಧನೌಕೆ ವಶಪಡಿಸಿಕೊಂಡಿದೆ. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ.
35 ಸೊಮಾಲಿಯಾ ಕಡಲ್ಗಳ್ಳರನ್ನು ಸೆರೆಹಿಡಿಯಾಗಿದ್ದು, ಅವರ ವಶದಲ್ಲಿದ್ದ 47 ಒತ್ತೆಯ ಹಾಡುಗಳನ್ನು ಬಿಡಿಸಿದ ಒಂದು ದಿನದ ಬಳಿಕ ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ನೌಕಾಪಡೆ, ಹಿಂದು ಮಹಾಸಾಗರ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಲಪಡಿಸುವುದು ಮತ್ತು ಕಡಲ್ಗಳ್ಳರ ಬೆಳವಣಿಗೆಯನ್ನು ತಡೆಯುವುದು ನಮ್ಮ ಸಂಕಲ್ಪ ಎಂದು ಹೇಳಿದೆ.
ಸುಮಾರು 40 ಗಂಟೆ ಕಾರ್ಯಾಚರಣೆಯಲ್ಲಿ ನೌಕಾಪಡೆತನ ಸ್ಟೆಲ್ತ್ ಗೈಡೆಡ್ ಕ್ಷಿಪಣಿ ವಿದ್ವಾಂಸಕ ಐಎನ್ಎಸ್ ಕೊಲ್ಕತ್ತಾ ಗಸ್ತ್ ನೌಕೆ, ವಿದ್ವಾಂಸಕ ಐಎನ್ಎಸ್ ಭದ್ರ, ಸಿ ಗಾರ್ಡಿಯನ್ ಡ್ರೋನ್ ಗಳನ್ನು ನಿಯೋಜಿಸಿದರ ಜೊತೆಗೆ ಸಿ 17 ವಿಮಾನದ ಮೂಲಕ ಸಾಗರ ಕಮಾಂಡಗಳನ್ನುನಿಯೋಜನೆ ಮಾಡಿತ್ತು. ಕಮಾಂಡಗಳು ಒತ್ತೆಯಾಳುಗಳನ್ನು ರಕ್ಷಿಸಿ, ಕಡಲ್ಗಳ್ಳರನ್ನು ಬಂಧಿಸಿತು.
ಕಳೆದ ಏಳು ವರ್ಷಗಳಲ್ಲಿ ಸೊಮಾಲಿಯಾ ಕಡಲ್ಗಳ್ಳರಿಂದ ಹಡಗನ್ನು ಯಶಸ್ವಿಯಾಗಿ ಸ್ವಾಧೀನ ಪಡಿಸಿಕೊಂಡ ಮೊದಲನೇ ಪ್ರಕರಣ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.