ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಐತಿಹಾಸಿಕ ಐದನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಪುಟಿನ್ ಅವರು ಪೂರ್ವನಿರ್ಧರಿತ ಚುನಾವಣಾ ವಿಜಯವನ್ನು ದೇಶದ ನಂಬಿಕೆ ಮತ್ತು ಭರವಸೆಯ ಸಂಕೇತವೆಂದು ಶ್ಲಾಘಿಸಿದ್ದಾರೆ.
ಮತ ಎಣಿಕೆಯ ಸಂದರ್ಭದಲ್ಲಿ ಶೇಕಡಾ 87 ರಷ್ಟು ಮತಗಳನ್ನು ಪಡೆಯುವ ಮೂಲಕ ಅವರು ಮತ್ತೊಂದು ಆರು ವರ್ಷಗಳ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇತರ ಅಭ್ಯರ್ಥಿಗಳು ಶೇಕಡಾ 5 ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಕಮ್ಯುನಿಸ್ಟ್ ಅಭ್ಯರ್ಥಿ ನಿಕೊಲಾಯ್ ಖರಿಟೋನೊವ್ ಎರಡನೇ ಮತ್ತು ಹೊಸಬರಾದ ವ್ಲಾಡಿಸ್ಲಾವ್ ದಾವಂಕೋವ್ ಮೂರನೇ ಸ್ಥಾನ ಪಡೆದರು. ಈ ವಿಜಯವು ಜೋಸೆಫ್ ಸ್ಟಾಲಿನ್ ಅನ್ನು ಮೀರಿಸುವ ಮೂಲಕ ರಷ್ಯಾಗೆ ಸುದೀರ್ಘ ಸೇವೆ ಸಲ್ಲಿಸಿದ ನಾಯಕನಾಗಿ ಪುಟಿನ್ ಅವರ ಸ್ಥಾನವನ್ನು ಗಟ್ಟಿಗೊಳಿಸಿದೆ.
ಪುಟಿನ್ ಅವರು ಮಾಸ್ಕೋದಲ್ಲಿ ವಿಜಯ ಭಾಷಣದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು,೭ಕ ಉಕ್ರೇನ್ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಎಂದು ಕರೆದಿರುವ ಕಾರ್ಯಗಳನ್ನು ಪರಿಹರಿಸಲು ಆದ್ಯತೆ ನೀಡುವುದಾಗಿ ಮತ್ತು ರಷ್ಯಾದ ಮಿಲಿಟರಿಯನ್ನು ಬಲಪಡಿಸುವುದಾಗಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.