ನವದೆಹಲಿ: ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸುವ ಮತ್ತು ಅವರಿಗೆ ಅವಕಾಶಗಳನ್ನು ಸೃಷ್ಟಿಸುವ ಸಮಾಜ ಮಾತ್ರ ಮುನ್ನಡೆಯಲು ಸಾಧ್ಯ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರದ ಮಹಿಳಾ ಕೇಂದ್ರಿತ ಯೋಜನೆಗಳನ್ನು ಉಲ್ಲೇಖಿಸಿದ್ದಾರೆ.
ʼಸಶಕ್ತ್ ನಾರಿ-ವೀಕ್ಷಿತ್ ಭಾರತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ಮೂರನೇ ಅವಧಿಯು ಮಹಿಳಾ ಶಕ್ತಿಯ ಏರಿಕೆಯಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ ಎಂದರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಹಿಂದಿನ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಹಿಳೆಯರ ಜೀವನ ಮತ್ತು ಕಷ್ಟಗಳು ಅವರಿಗೆ ಆದ್ಯತೆಯಾಗಿರಲಿಲ್ಲ, ಆದರೆ ಬಿಜೆಪಿ ಪಕ್ಷವು ಜೀವನದ ಪ್ರತಿಯೊಂದು ಹಂತದಲ್ಲೂ ಅವರಿಗೆ ಸಹಾಯ ಮಾಡಲು ವಿಭಿನ್ನ ಉಪಕ್ರಮಗಳೊಂದಿಗೆ ಹೊರಬಂದಿದೆ ಎಂದರು.
ಶೌಚಾಲಯಗಳ ಕೊರತೆ, ಸ್ಯಾನಿಟರಿ ಪ್ಯಾಡ್ಗಳ ಬಳಕೆ, ಹೊಗೆ ಉಂಟು ಮಾಡುವ ಅಡುಗೆಮನೆಯ ಇಂಧನಗಳಾದ ಮರ ಮತ್ತು ಕಲ್ಲಿದ್ದಲಿನ ದುಷ್ಪರಿಣಾಮಗಳು ಮತ್ತು ಬ್ಯಾಂಕ್ ಖಾತೆಗಳ ಅಗತ್ಯ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳ ಕುರಿತು ಕೆಂಪು ಕೋಟೆಯಲ್ಲಿ ನಿಂತು ಮಾತನಾಡಿದ ಮೊದಲ ಪ್ರಧಾನಿ ನಾನು ಎಂದರು.
ಇದಕ್ಕಾಗಿ ಕಾಂಗ್ರೆಸ್ನಂತಹ ರಾಜಕೀಯ ಪಕ್ಷಗಳು ಅವರನ್ನು ಗೇಲಿ ಮಾಡಿ ಅವಮಾನಿಸಿವೆ ಎಂದರು.
ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ರೂ. 8 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಮಹಿಳೆಯರಿಗೆ ವಿತರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಲ್ಲಿಯವರೆಗೆ 1 ಕೋಟಿಗೂ ಹೆಚ್ಚು ಮಹಿಳೆಯರು ‘ಲಖ್ಪತಿ ದೀದಿ’ಗಳಾಗಿದ್ದಾರೆ ಎಂದು ಅವರು ಹೇಳಿದರು.
ಮಹಿಳೆಯರಿಗೆ ಸ್ವಲ್ಪ ಸಹಾಯ ಮಾಡಿದರೆ ಅವರು ಇತರರಿಗೆ ಸಹಾಯ ಮಾಡಬಹುದು ಎಂಬುದು ನನ್ನ ಅನುಭವವಾಗಿದೆ ಎಂದು ಪ್ರಧಾನಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.