ನವದೆಹಲಿ: ಭಾರತದ ಮೇಲೆ ಯಾರಾದರೂ ದಾಳಿ ನಡೆಸಿದರೆ, ಕ್ಷಿಪ್ರವಾಗಿ ಮತ್ತು ಸಮರ್ಥವಾಗಿ ಪ್ರತಿಕ್ರಿಯಿಸಲು ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಜ್ಜುಗೊಂಡಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಎನ್ಡಿಟಿವಿ ಡಿಫೆನ್ಸ್ ಸಮಿಟ್ನಲ್ಲಿ ಮಾತನಾಡಿದ ಅವರು, 2014ರಲ್ಲಿ ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದೆವು. ಆತ್ಮನಿರ್ಭರವನ್ನು ಪ್ರೋತ್ಸಾಹಿಸಲಾಯಿತು ಮತ್ತು ನಾವು ಅನೇಕ ಮೇಕ್-ಇನ್-ಇಂಡಿಯಾ ಉಪಕ್ರಮಗಳನ್ನು ಪರಿಚಯಿಸಿದ್ದೇವೆ. ನಮ್ಮ ಗಮನ ಮಿಲಿಟರಿ ಆಧುನೀಕರಣದತ್ತ ಇತ್ತು. ಭೂಮಿಯಿಂದಾಗಲಿ, ಆಕಾಶದಿಂದಾಗಲಿ ಅಥವಾ ಸಮುದ್ರದಿಂದಾಗಲಿ, ಯಾರಾದರೂ ಭಾರತದ ಮೇಲೆ ದಾಳಿ ಮಾಡಿದರೆ, ನಮ್ಮ ಪಡೆಗಳು ಪ್ರಬಲವಾಗಿ ಪ್ರತ್ಯುತ್ತರ ನೀಡುತ್ತವೆ. ಶಾಂತಿಕಾಲವಿರಲಿ, ಇಲ್ಲದಿರಲಿ ಯುದ್ಧಕ್ಕೆ ನಾವು ಸದಾ ಸಿದ್ಧರಾಗಿರಬೇಕು. ನಾವು ಸಿದ್ಧರಾಗಿರಬೇಕು. ನಾವು ಯಾರ ಜಮೀನನ್ನೂ ಆಕ್ರಮಿಸಿಕೊಂಡಿಲ್ಲ. ಆದರೆ ಭಾರತದ ಮೇಲೆ ಯಾರಾದರೂ ದಾಳಿ ನಡೆಸಿದರೆ ಅದಕ್ಕೆ ತಕ್ಕ ಉತ್ತರ ಕೊಡುವ ಸ್ಥಿತಿಯಲ್ಲಿ ನಾವಿದ್ದೇವೆ ಎಂದಿದ್ದಾರೆ.
ಹಿಂದಿನ ಸರ್ಕಾರಗಳು ರಕ್ಷಣಾ ಕ್ಷೇತ್ರಕ್ಕೆ ಒತ್ತು ನೀಡಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ನಾವು ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಯನ್ನು ತಂದಿದ್ದೇವೆ. ನಾವು ಇತರರ ಮೇಲೆ ಅವಲಂಬಿತರಾಗಿದ್ದೇವೆ ಎಂಬ ಆಲೋಚನೆಯಿಂದ ಮುಕ್ತರಾಗಬೇಕು ಮತ್ತು ನಾವು ಪ್ರಗತಿಯನ್ನು ಸಮೀಪಿಸುವ ವಿಧಾನವನ್ನು ಬದಲಾಯಿಸಬೇಕು. ನಾವು ಭಾರತದ ದೃಷ್ಟಿಕೋನದಿಂದ ರಕ್ಷಣಾ ಕ್ಷೇತ್ರವನ್ನು ಬಲಪಡಿಸಿದ್ದೇವೆ. ಇದರ ಪರಿಣಾಮ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಲೇರುತ್ತಿದೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ದಿನ ಮತ್ತ ನಮ್ಮ ಮಿಲಿಟರಿ ಶಕ್ತಿಯು ವಿಶ್ವದಲ್ಲೇ ಶ್ರೇಷ್ಠವಾಗುವ ದಿನ ಹತ್ತಿರದಲ್ಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.