ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ PMFBY ಅಡಿಯಲ್ಲಿ ದಾಖಲಾತಿಯು 2023-24 ರ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 27 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಹೇಳಿದೆ.
ಪಿಎಂಎಫ್ಬಿವೈ ಅನುಷ್ಠಾನದ ಕಳೆದ ಎಂಟು ವರ್ಷಗಳಲ್ಲಿ ಸುಮಾರು 57 ಕೋಟಿ ರೈತರ ಅರ್ಜಿಗಳು ದಾಖಲಾಗಿವೆ ಮತ್ತು 23 ಕೋಟಿಗೂ ಹೆಚ್ಚು ರೈತ ಅರ್ಜಿದಾರರು ಹಣ ಸ್ವೀಕರಿಸಿದ್ದಾರೆ. ಈ ಅವಧಿಯಲ್ಲಿ ರೈತರು 31 ಸಾವಿರ ಕೋಟಿ ರೂಗಳಿಗೂ ಅಧಿಕ ಪ್ರೀಮಿಯಂ ಪಾವತಿಸಿದ್ದಾರೆ, 1 ಲಕ್ಷದ 55 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಕ್ಲೇಮ್ಗಳನ್ನು ಪಾವತಿಸಲಾಗಿದೆ. ರೈತರು ಪಾವತಿಸಿದ ಪ್ರತಿ 100 ರೂಪಾಯಿ ಪ್ರೀಮಿಯಂಗೆ ಅವರು ಸುಮಾರು 500 ರೂಪಾಯಿಗಳನ್ನು ಕ್ಲೈಮ್ಗಳಾಗಿ ಸ್ವೀಕರಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ಬೇಡಿಕೆ ಚಾಲಿತ ಯೋಜನೆಯಾಗಿದೆ ಮತ್ತು ರಾಜ್ಯಗಳು ಮತ್ತು ರೈತರಿಗೆ ಸ್ವಯಂಪ್ರೇರಿತವಾಗಿದೆ. 2021-22 ಮತ್ತು 2022-23ರ ಅವಧಿಯಲ್ಲಿ ರೈತರ ಅರ್ಜಿಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ 33.4 ಪ್ರತಿಶತ ಮತ್ತು 41 ಪ್ರತಿಶತದಷ್ಟು ಹೆಚ್ಚಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಯೋಜನೆಯಡಿ ವಿಮೆ ಮಾಡಲಾದ ಒಟ್ಟು ರೈತರಲ್ಲಿ ಸುಮಾರು 42 ಪ್ರತಿಶತದಷ್ಟು ಜನರು ಸಾಲ ಪಡೆದಿಲ್ಲ.
ಪ್ರೀಮಿಯಂ ವಿಷಯದಲ್ಲಿ ಜಾಗತಿಕವಾಗಿ ಮೂರನೇ ಅತಿ ದೊಡ್ಡ ವಿಮಾ ಯೋಜನೆ, 2016 ರಲ್ಲಿ ಪ್ರಾರಂಭವಾದ ಪಿಎಂ ಫಸಲ್ ಬಿಮಾ ಯೋಜನೆ, ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ಬೆಳೆ ನಷ್ಟ ಅಥವಾ ಹಾನಿಯಿಂದ ರೈತರನ್ನು ರಕ್ಷಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.