ನವದೆಹಲಿ: ಯುಎಇ ಮತ್ತು ಬಾಂಗ್ಲಾದೇಶಕ್ಕೆ 64, 400 ಟನ್ ಈರುಳ್ಳಿ ರಫ್ತು ಮಾಡಲು ರಫ್ತುದಾರರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ನ ಅಧಿಸೂಚನೆಗಳ ಪ್ರಕಾರ, ಬಾಂಗ್ಲಾದೇಶಕ್ಕೆ 50 ಸಾವಿರ ಟನ್ ಈರುಳ್ಳಿ ರಫ್ತು ಮಾಡಲು ಮತ್ತು 14,400 ಟನ್ಗಳನ್ನು ಯುಎಇಗೆ ರಫ್ತು ಮಾಡಲು ನ್ಯಾಷನಲ್ ಕೋಆಪರೇಟಿವ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಮೂಲಕ ಅನುಮತಿಸಲಾಗಿದೆ.
ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬೆಲೆಯನ್ನು ನಿಯಂತ್ರಣದಲ್ಲಿಡಲು ಕೇಂದ್ರವು ಕಳೆದ ವರ್ಷ ಡಿಸೆಂಬರ್ನಲ್ಲಿ ಈ ವರ್ಷದ ಮಾರ್ಚ್ 31 ರವರೆಗೆ ಈರುಳ್ಳಿ ರಫ್ತು ನಿಷೇಧಿಸಿತ್ತು.
30 ಸಾವಿರ ಮೆಟ್ರಿಕ್ ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಾಂಜಾನಿಯಾಕ್ಕೆ ಮತ್ತು 80 ಸಾವಿರ ಟನ್ ಬ್ರೋಕನ್ ರೈಸ್ ಅನ್ನು ಜಿಬೌಟಿ ಮತ್ತು ಗಿನಿಯಾ ಬಿಸ್ಸೌಗೆ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.