ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಇಂಡೋನೇಷ್ಯಾದ ನೂತನ ಚುನಾಯಿತ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಅಭಿನಂದಿಸಿದರು ಮತ್ತು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.
ಆಗ್ನೇಯ ಏಷ್ಯಾ ರಾಷ್ಟ್ರ ಇಂಡೋನೇಷ್ಯಾದ ಮುಂದಿನ ಅಧ್ಯಕ್ಷರಾಗಿ ನೇಮಕವಾದ ಪ್ರಬೋವೊ ಸುಬಿಯಾಂಟೊ ಅವರು ಮಾಜಿ ಅಧಯಕ್ಷ ಜೋಕೊ ವಿಡೋಡೊ ಅವರ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
“ಯಶಸ್ವಿಯಾದ ಅಧ್ಯಕ್ಷೀಯ ಚುನಾವಣೆಗಳಿಗಾಗಿ ಇಂಡೋನೇಷ್ಯಾದ ಜನರಿಗೆ ಅಭಿನಂದನೆಗಳು ಮತ್ತು ಮುನ್ನಡೆಯಲ್ಲರುವ ಪ್ರಬೋವೊ ಸುಬಿಯಾಂಟೊ ಅವರಿಗೆ ಅಭಿನಂದನೆಗಳು. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು ಹೊಸ ಪ್ರೆಸಿಡೆನ್ಸಿಯೊಂದಿಗೆ ಕೆಲಸ ಮಾಡಲು ಎದುರುನೋಡುತ್ತೇವೆ”ಎಂದು ಪಿಎಂ ಮೋದಿ ಹೇಳಿದರು.
ರಿಫಾರ್ಮ್ಡ್ ಜನರಲ್ ಎಂದೇ ಬ್ರಾಂಡ್ ಆಗಿರುವ ಪ್ರಬೋವೊ ಸುಬಿಯಾಂಟೊ ವಿಶೇಷ ಪಡೆಗಳ ಮಾಜಿ ಅಧಿಕಾರಿ ಮತ್ತು ಈ ಹಿಂದೆ ಇಂಡೋನೇಷ್ಯಾದ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಮಿಲಿಟರಿ ಸೇವೆಯ ಸಮಯದಲ್ಲಿ ಮಾನವ ಹಕ್ಕುಗಳ ದುರುಪಯೋಗ ಮಾಡಿದ್ದಾರೆ ಎಂಬ ಆರೋಪಕ್ಕೆ ಇವರು ತುತ್ತಾಗಿದ್ದಾರೆ. ಆದರೆ ಪ್ರಬೋವೊ ಸುಬಿಯಾಂಟೊ ತನ್ನ ಇಮೇಜ್ ಅನ್ನು ಮತ್ತೆ ಬಿಲ್ಡ್ ಮಾಡಲು ಸಾಕಷ್ಟು ಶ್ರಮಿಸಿದರು, ಇದು ಅವರ ಜನಪ್ರಿಯತೆಗೆ ಗಮನಾರ್ಹವಾದ ಉತ್ತೇಜನಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.
Congratulations to the people of Indonesia on the successful Presidential elections and @prabowo on the lead. Look forward to working with the new Presidency to further strengthen Comprehensive Strategic Partnership between India and Indonesia.
— Narendra Modi (@narendramodi) February 18, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.