ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರದ ಭವ್ಯ ಉದ್ಘಾಟನೆಯ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 14 ರಂದು ಅಬುಧಾಬಿಯಲ್ಲಿ BAPS ಹಿಂದೂ ಮಂದಿರವನ್ನು ಉದ್ಘಾಟಿಸಲು ಸಿದ್ಧರಾಗಿದ್ದಾರೆ. ಅವರು ಯುಎಇಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮವಾದ ಅಹ್ಲಾನ್ ಮೋದಿಯನ್ನು ಉದ್ದೇಶಿಸಿ ಫೆಬ್ರವರಿ 13ರಂದು ಮಾತನಾಡಲಿದ್ದಾರೆ.
ಫೆಬ್ರವರಿ 14 ರಂದು ಮಹಂತ್ ಸ್ವಾಮಿ ಮಹಾರಾಜ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಂದ ನಿಗದಿತ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ಅಧಿಕೃತವಾಗಿ ಮಾಹಿತಿ ನೀಡಲಾಗಿದೆ
ಯುಎಇಯ ಮೊದಲ ಹಿಂದೂ ದೇವಾಲಯದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲು ಆಧ್ಯಾತ್ಮಿಕ ನಾಯಕ ಮಹಂತ್ ಸ್ವಾಮಿ ಮಹಾರಾಜ್ ಸೋಮವಾರ ಅಬುಧಾಬಿಗೆ ಆಗಮಿಸಿದರು. ದೇವಾಲಯದ ನಿರ್ಮಾಣ ಕಾರ್ಯವು ಡಿಸೆಂಬರ್ 2019 ರಲ್ಲಿ ಪ್ರಾರಂಭವಾಯಿತು ಮತ್ತು ಇದು ಫೆಬ್ರವರಿ 14 ರಂದು ಉದ್ಘಾಟನೆಗೊಳ್ಳಲಿದೆ.
ದೇವಾಲಯವು ಫೆಬ್ರವರಿ 18 ರಂದು ಸಾರ್ವಜನಿಕರಿಗೆ ತೆರೆಯುತ್ತದೆ. ಯುಇಎ ಮೊದಲ ಸಾಂಪ್ರದಾಯಿಕ ಹಿಂದೂ ಕಲ್ಲಿನ ದೇವಾಲಯವು 27 ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಗುಲಾಬಿ ಸುಣ್ಣದ ಕಲ್ಲು ಮತ್ತು ಬಿಳಿ ಅಮೃತಶಿಲೆಯನ್ನು ಬಳಸಿ ನಿರ್ಮಿಸಲಾಗಿದೆ. ಈ ದೇವಾಲಯದ ನಿರ್ಮಾಣದಲ್ಲಿ ಉಕ್ಕು ಅಥವಾ ಕಾಂಕ್ರೀಟ್ ಬಳಸಲಾಗಿಲ್ಲ. ಯುಎಇಯ ಏಳು ಎಮಿರೇಟ್ಗಳನ್ನು ಸಂಕೇತಿಸುವ ಏಳು ಪಿನಾಕಲ್ಗಳನ್ನು ಸಹ BAPS ಹಿಂದೂ ಮಂದಿರದಲ್ಲಿ ನಿರ್ಮಿಸಲಾಗಿದೆ.
His Holiness Mahant Swami Maharaj, the spiritual leader of BAPS arrives at the BAPS Hindu Mandir, Abu Dhabi marking the beginning of the Festival of Harmony #FOHabudhabi #AbuDhabiMandir #FestivalofHarmony #Love #Peace #Harmony pic.twitter.com/wF4Ahhu8dE
— BAPS Hindu Mandir (@AbuDhabiMandir) February 5, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.