ನ್ಯೂಯಾರ್ಕ್: ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರು ವಿಶ್ವಸಂಸ್ಥೆಯ ಸಂಸ್ಥೆಗಳ ಪರಿಷ್ಕರಣೆಗೆ ಒತ್ತಾಯಿಸಿದ್ದಾರೆ. ಅಲ್ಲದೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯನಾಗಿಲ್ಲದೆ ಇರುವುದು ‘ಅಸಂಬದ್ಧ’ ಎಂದು ಕರೆದಿದ್ದಾರೆ.
ಹೆಚ್ಚಿನ ಶಕ್ತಿಯನ್ನು ಹೊಂದಿರುವ ದೇಶಗಳು ತಮ್ಮ ಅಧಿಕಾರ ಬಿಟ್ಟುಕೊಡಲು ಬಯಸುವುದಿಲ್ಲ ಎಂದು ಹೇಳಿದರು, ಆಫ್ರಿಕಾವು ಒಟ್ಟಾಗಿ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವವನ್ನು ಹೊಂದಿರಬೇಕು ಎಂದು ಮಸ್ಕ್ ಪ್ರತಿಪಾದಿಸಿದರು.
ಎಕ್ಸ್ ಪೋಸ್ಟ್ ಮಾಡಿರುವ ಮಸ್ಕ್, “ಕೆಲವು ಹಂತದಲ್ಲಿ, UN ಸಂಸ್ಥೆಗಳ ಪರಿಷ್ಕರಣೆ ಅಗತ್ಯವಿದೆ. ಸಮಸ್ಯೆಯೆಂದರೆ ಹೆಚ್ಚಿನ ಅಧಿಕಾರ ಹೊಂದಿರುವವರು ಅದನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನವನ್ನು ಹೊಂದಿಲ್ಲ, ಭೂಮಿಯ ಮೇಲೆ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದ್ದರೂ ಸಹ, ಇದು ಅಸಂಬದ್ಧವಾಗಿದೆ. ಆಫ್ರಿಕಾವು ಒಟ್ಟಾಗಿ ಶಾಶ್ವತ ಸ್ಥಾನವನ್ನು ಹೊಂದಿರಬೇಕು” ಎಂದಿದ್ದಾರೆ.
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಕೂಡ ಯುಎನ್ ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕೆಂದು ಮನವಿ ಮಾಡಿದ್ದರು.
“ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಆಫ್ರಿಕಾಕ್ಕೆ ಇನ್ನೂ ಒಬ್ಬ ಖಾಯಂ ಸದಸ್ಯರ ಕೊರತೆಯಿದೆ ಎಂಬುದನ್ನು ನಾವು ಹೇಗೆ ಒಪ್ಪಿಕೊಳ್ಳಬಹುದು? ಸಂಸ್ಥೆಗಳು ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕು, 80 ವರ್ಷಗಳ ಹಿಂದಿನ ಜಗತ್ತನ್ನು ಅಲ್ಲ. ಸೆಪ್ಟೆಂಬರ್ನ ಭವಿಷ್ಯದ ಶೃಂಗಸಭೆಯು ಜಾಗತಿಕ ಆಡಳಿತ ಸುಧಾರಣೆಗಳನ್ನು ಪರಿಗಣಿಸಲು ಮತ್ತು ನಂಬಿಕೆಯನ್ನು ಮರು ನಿರ್ಮಿಸಲು ಒಂದು ಅವಕಾಶವಾಗಿದೆ “ಗುಟೆರಸ್ ಜನವರಿ 21 ರಂದು ಪೋಸ್ಟ್ನಲ್ಲಿ ಹೇಳಿದ್ದಾರೆ.
Elon Musk tweets "At some point, there needs to be a revision of the UN bodies…India not having a permanent seat on the Security Council, despite being the most populous country on Earth, is absurd. Africa collectively should also have a permanent seat imo." pic.twitter.com/X8avkRuxf6
— ANI (@ANI) January 23, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.