ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಭಾನುವಾರ ದೆಹಲಿಯ ಗುರು ರವಿದಾಸ್ ಮಂದಿರದಲ್ಲಿ “ರಾಮ ಲಲಾ ಪ್ರಾಣ ಪ್ರತಿಷ್ಠಾ” ಸಂದರ್ಭವನ್ನು ಗುರುತಿಸಲು ಒಂದು ವಾರದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರಧಾನಿ ಮೋದಿಯವರ ನಿರ್ದೇಶನದಂತೆ ಬಿಜೆಪಿಯು ಮಕರ ಸಂಕ್ರಾಂತಿಯಿಂದ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದ ದಿನವಾದ ಜನವರಿ 22 ರವರೆಗೆ ದೇಶದ ವಿವಿಧ ದೇವಾಲಯಗಳು ಮತ್ತು ಪವಿತ್ರ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಿದೆ ಎಂದು ಅವರು ಹೇಳಿದರು.
ಇನ್ನೊಂದೆಡೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ರಾಮ ಮಂದಿರದ ಆವರಣವನ್ನು ಸ್ವಚ್ಛಗೊಳಿಸಿದರು. ಸ್ವಚ್ಛತಾ ಅಭಿಯಾನವು ಭಗವಾನ್ ರಾಮನಿಗೆ ಸಲ್ಲಿಸುವ ಗೌರವವಾಗಿದೆ ಮತ್ತು ಸ್ವಚ್ಛ ಭಾರತಕ್ಕಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ ಎಂದು ಅವರು ಹೇಳಿದರು.
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದ ಪ್ರಸಿದ್ಧ ದೇವಾಲಯವಾದ ಕೈಂಚಿ ಧಾಮ್ನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಸ್ವಚ್ಛತಾ ಅಭಿಯಾನವು ಜನರ ಕಲ್ಯಾಣ ಮತ್ತು ಪರಿಸರ ಸಂರಕ್ಷಣೆಗೆ ಬಿಜೆಪಿಯ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಹೇಳಿದರು.
#WATCH | BJP national president JP Nadda participates in a cleanliness drive at Guru Ravidas Mandir in Delhi as part of the 'Swachhta Abhiyaan' ahead of the Pran Pratishtha ceremony of Ram temple in Ayodhya. pic.twitter.com/cxU5zBMslq
— ANI (@ANI) January 14, 2024
#WATCH | Uttar Pradesh CM Yogi Adityanath participates in a cleanliness drive in Ayodhya as part of the 'Swachhta Abhiyaan' ahead of the Pran Pratishtha ceremony of Ram temple in Ayodhya. pic.twitter.com/922OZ1Gd2P
— ANI UP/Uttarakhand (@ANINewsUP) January 14, 2024
#WATCH | Nainital, Uttarakhand: CM Pushkar Singh Dhami visits Kainchi Dham to hold cleanliness drive as part of the 'Swachhta Abhiyaan' kickstarted by PM Narendra Modi. pic.twitter.com/1S4IRiY7Q8
— ANI (@ANI) January 14, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.