ಬೆಂಗಳೂರು: ಫೋರ್ಟಿಸ್ ಹೆಲ್ತ್ಕೇರ್ ಲಿಮಿಟೆಡ್ ಬುಧವಾರ ಲಾ ಫೆಮ್ಮೆ ಎಂಬ ಕೇವಲ ಮಹಿಳೆಯರಿಗಾಗಿ ಸಮಗ್ರ ಆರೋಗ್ಯ ಸೌಲಭ್ಯ ಹೊಂದಿರುವ ಆರೋಗ್ಯ ಸಂಸ್ಥೆಯನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿದೆ.
ನವದೆಹಲಿಯ ಬಳಿಕ ಸಂಸ್ಥೆ ಎರಡನೇ ಬಾರಿಗೆ ಇಂತಹ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ನಿರ್ಮಿಸಿದೆ. ಬುಧವಾರ ಇದರ ಉದ್ಘಾಟನಾ ಕಾರ್ಯ ನಡೆದಿದ್ದು, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಮಹಿಳಾ ಸಾಧಕರಾದ ಮಾಜಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಜೀಜಾ ಹರಿ ಸಿಂಗ್, ಬರಹಗಾರ್ತಿ ಅನಿತಾ ನಾಯರ್, ಫ್ಯಾಶನ್ ಡಿಸೈನರ್ ದೀಪಿಕಾ ಗೋವಿಂದ ರ್ಯಾಂಪ್ನಲ್ಲಿ ಹೆಜ್ಜೆಯಿಡುವ ಮೂಲಕ ಸಂಸ್ಥೆಗೆ ಚಾಲನೆ ನೀಡಿದರು.
ಸಮಕಾಲಿನ ಮಹಿಳೆಯರನ್ನು ಮತ್ತು ಅವರು ವಹಿಸುವ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಫೋರ್ಟಿಸ್ ಲಾ ಫೆಮ್ಮೆ ಸಂಸ್ಥೆಯನ್ನು ನಿರ್ಮಿಸಲಾಗಿದೆ. ಸೌಂದರ್ಯ ಮತ್ತು ಸೌಂದರ್ಯವರ್ಧಕ, ಡೆಂಟಲ್ ಕೇರ್, ಪ್ರಸವ ಮತ್ತು ಪ್ರಸವ ಪೂರ್ವ ಆರೈಕೆ, ಮನೆಯ ಆರೈಕೆ, ಬಂಜೆತನ ನಿವಾರಣ ಚಿಕಿತ್ಸೆ, ಜನನಾಂಗ ಮತ್ತು ಭ್ರೂಣದ ಔಷಧ ಇತ್ಯಾದಿ ಮಹಿಳೆಯರಗೆ ಸಂಬಂಧಪಟ್ಟ ಎಲ್ಲಾ ಚಿಕಿತ್ಸೆಗಳು ಇಲ್ಲಿ ಲಭ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.