ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ತಮ್ಮ ಭೇಟಿಯ ಅನುಭವವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಲಕ್ಷದ್ವೀಪದಲ್ಲಿ ಮೋದಿ ನಿನ್ನೆ 1,156 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದರು.
ಇಂದು ಎಕ್ಸ್ ಪೋಸ್ಟ್ ಮಾಡಿರುವ ಮೋದಿ, “ಇತ್ತೀಚೆಗೆ, ಲಕ್ಷದ್ವೀಪದ ಜನರ ನಡುವೆ ಇರಲು ನನಗೆ ಅವಕಾಶ ಸಿಕ್ಕಿತು. ಅದರ ದ್ವೀಪಗಳ ಅದ್ಭುತ ಸೌಂದರ್ಯ ಮತ್ತು ಅದರ ಜನರ ಆತ್ಮೀಯತೆಗೆ ನಾನು ಇನ್ನೂ ವಿಸ್ಮಯಗೊಂಡಿದ್ದೇನೆ. ಅಗತ್ತಿ, ಬಂಗಾರಮ್ ಮತ್ತು ಕವರಟ್ಟಿಯಲ್ಲಿನ ಜನರೊಂದಿಗೆ ಸಂವಹನ ನಡೆಸಲು ನನಗೆ ಅವಕಾಶ ಸಿಕ್ಕಿತು. ದ್ವೀಪದ ಜನರಿಗೆ ಅವರ ಆತಿಥ್ಯಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ. ಲಕ್ಷದ್ವೀಪದ ವೈಮಾನಿಕ ನೋಟಗಳು ಸೇರಿದಂತೆ ಕೆಲವು ನೋಟಗಳು ಇಲ್ಲಿವೆ” ಎಂದಿದ್ದಾರೆ.
ಕವರಟ್ಟಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕೇಂದ್ರದ ಹಿಂದಿನ ಸರ್ಕಾರಗಳು ಗಡಿ ಪ್ರದೇಶಗಳು ಮತ್ತು ದ್ವೀಪಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸಿದ್ದರು.
“ಸ್ವಾತಂತ್ರ್ಯದ ನಂತರ, ದಶಕಗಳ ಕಾಲ ಕೇಂದ್ರದಲ್ಲಿ ಇದ್ದ ಸರ್ಕಾರಗಳ ಏಕೈಕ ಆದ್ಯತೆಯು ತಮ್ಮದೇ ಆದ ರಾಜಕೀಯ ಪಕ್ಷಗಳ ಅಭಿವೃದ್ಧಿಯಾಗಿತ್ತು. ದೂರದ ರಾಜ್ಯಗಳು, ಗಡಿ ಪ್ರದೇಶಗಳು ಅಥವಾ ಸಾಗರದ ಮಧ್ಯದಲ್ಲಿರುವವರಿಗೆ ಯಾವುದೇ ಗಮನ ನೀಡಲಾಗಿಲ್ಲ” ಎಂದಿದ್ದಾರೆ.
ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು ಕೊಚ್ಚಿ-ಲಕ್ಷದ್ವೀಪ ದ್ವೀಪಗಳ ಸಬ್ಮೆರಿನ್ ಆಪ್ಟಿಕಲ್ ಫೈಬರ್ ಸಂಪರ್ಕ ಯೋಜನೆಯನ್ನು ಒಳಗೊಂಡಿದೆ, ನಿಧಾನಗತಿಯ ಇಂಟರ್ನೆಟ್ ವೇಗದ ಸವಾಲನ್ನು ನಿವಾರಿಸುವ ಗುರಿಯನ್ನು ಇದು ಹೊಂದಿದೆ ಎಂದಿದ್ದಾರೆ. ಲಕ್ಷದ್ವೀಪದಲ್ಲಿ, 2020 ರಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ಈ ಯೋಜನೆಯನ್ನು ಘೋಷಿಸಿದ್ದರು.
Recently, I had the opportunity to be among the people of Lakshadweep. I am still in awe of the stunning beauty of its islands and the incredible warmth of its people. I had the opportunity to interact with people in Agatti, Bangaram and Kavaratti. I thank the people of the… pic.twitter.com/tYW5Cvgi8N
— Narendra Modi (@narendramodi) January 4, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.