ಶ್ರೀನಗರ: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ರಾ ಪಟ್ಟಣದ ತ್ರಿಕೂಟ ಬೆಟ್ಟಗಳಲ್ಲಿರುವ ವೈಷ್ಣೋ ದೇವಿಯ ಪವಿತ್ರ ಗುಹಾ ದೇಗುಲಕ್ಕೆ ಈ ವರ್ಷ ಕನಿಷ್ಠ 96 ಲಕ್ಷ ಯಾತ್ರಾರ್ಥಿಗಳು ಆಗಮಿಸಿದ್ದಾರೆ, ಇದು ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಸುಮಾರು 95.86 ಲಕ್ಷ ಯಾತ್ರಾರ್ಥಿಗಳು ವೈಷ್ಣೋ ದೇವಿಯ ದರ್ಶನ ಪಡೆದಿದ್ದಾರೆ. 2012ರಲ್ಲಿ ಯಾತ್ರೆಯ ಇತಿಹಾಸದಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ 1 ಕೋಟಿ 4 ಲಕ್ಷದ 9,569 ಭಕ್ತರು ಪುಣ್ಯ ಕ್ಷೇತ್ರಕ್ಕೆ ತೆರಳಿ ದರ್ಶನ ಪಡೆದಿದ್ದರು. ಅದಾದ ಬಳಿಕ ಈ ವರ್ಷವೇ ಅತಿಹೆಚ್ಚು ಭಕ್ತರು ದೇಗುಲಕ್ಕೆ ಆಗಮಿಸಿದ್ದಾರೆ.
ಪ್ರತಿದಿನ ಸುಮಾರು 40 ಸಾವಿರ ಭಕ್ತರು ದೇಗುಲಕ್ಕೆ ಚಾರಣವನ್ನು ಕೈಗೊಳ್ಳುತ್ತಾರೆ. ಇತ್ತೀಚೆಗೆ ಉದ್ಘಾಟನೆಗೊಂಡ ಸ್ಕೈವಾಕ್ ಜನಸಂದಣಿ ನಿರ್ವಹಣೆಯಲ್ಲಿ ಬಹಳ ಸಹಾಯಕವಾಗಿದೆ.
ಮಾತಾ ವೈಷ್ಣೋ ದೇವಿ ಭವನದ ಜೊತೆಗೆ, ಕತ್ರಾ, ಅಧ್-ಕುನ್ವಾರಿ, ಭೈರೋನ್ ಘಾಟಿ ಮತ್ತು ಕತ್ರಾ-ಭವನ ಟ್ರ್ಯಾಕ್ನಲ್ಲಿರುವ ಇತರ ಸ್ಥಳಗಳಲ್ಲಿ ಯಾತ್ರಾರ್ಥಿಗಳಿಗೆ ಸಾಕಷ್ಟು ವ್ಯವಸ್ಥೆಗಳು ಮತ್ತು ಸೌಲಭ್ಯಗಳನ್ನು ಮಾಡಲಾಗಿದೆ. ಮಾತಾ ವೈಷ್ಣೋ ದೇವಿ ಭವನ ಮತ್ತು ದುರ್ಗಾ ಭವನದಲ್ಲಿ ಸ್ಕೈವಾಕ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಭೇಟಿ ನೀಡುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಶ್ರೀ ಮಾತಾ ವೈಷ್ಣೋ ದೇವಿ ಭವನದಿಂದ ಭೈರೋನ್ ಜಿ ದೇವಸ್ಥಾನದವರೆಗೆ ಪ್ರಯಾಣಿಕರ ರೋಪ್ವೇ ಇದ್ದು, ಇದಕ್ಕಾಗಿ ಆನ್ಲೈನ್ ಬುಕಿಂಗ್ ಸೌಲಭ್ಯವನ್ನು ಸಹ ಪ್ರಾರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.