ನವದೆಹಲಿ: ಭಾರತೀಯ ನೌಕಾಪಡೆಯು ತನ್ನ ಇತ್ತೀಚಿನ ಸ್ಟೆಲ್ತ್ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್ಎಸ್ ಇಂಫಾಲ್ ಅನ್ನು ಇಂದು ಮುಂಬೈನಲ್ಲಿ ತನ್ನ ಪಡೆಗೆ ಸೇರ್ಪಡೆಗೊಳಿಸಿತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಬಂದರಿನಲ್ಲಿ ಮತ್ತು ಸಮುದ್ರದಲ್ಲಿ ಕಠಿಣ ಮತ್ತು ಸಮಗ್ರ ಪ್ರಯೋಗದ ನಂತರ ಈ ವರ್ಷದ ಅಕ್ಟೋಬರ್ನಲ್ಲಿ ಹಡಗನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು.
ಇಂಫಾಲ್ ಈಶಾನ್ಯ ರಾಜ್ಯ ಮಣಿಪುರದ ರಾಜಧಾನಿ ನಗರದ ಹೆಸರಾಗಿದೆ. ಈ ಹೆಸರನ್ನು ಹೊಂದಿದ ಮೊದಲ ಯುದ್ಧನೌಕೆ ಇದಾಗಿದೆ. ಇದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಣಿಪುರದ ತ್ಯಾಗ ಮತ್ತು ಕೊಡುಗೆಗಳಿಗೆ ನೀಡಿದ ಸೂಕ್ತವಾದ ಗೌರವವೆಂದೇ ವಿಶ್ಲೇಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.