ನವದೆಹಲಿ: ನೇಪಾಳದ ಜನಕಪುರ ಮತ್ತು ಭಾರತದ ಅಯೋಧ್ಯೆ ನಡುವೆ ಸಹೋದರಿ ನಗರ ಸಂಬಂಧವನ್ನು ಸ್ಥಾಪಿಸಲು ನೇಪಾಳ ಮತ್ತು ಭಾರತ ಕೆಲಸ ಮಾಡುತ್ತಿವೆ ಎಂದು ಭಾರತದಲ್ಲಿನ ನೇಪಾಳದ ರಾಯಭಾರಿ ಶಂಕರ್ ಪ್ರಸಾದ್ ಶರ್ಮಾ ಅವರು ಹೇಳಿದ್ದಾರೆ.
ಚೇಂಬರ್ ಆಫ್ ಇಂಡಿಯಾ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಜನಕಪುರ ಮೇಯರ್ ಮನೋಜ್ ಕುಮಾರ್ ಸಾಹ್ ಮತ್ತು ಇತರ ಗಣ್ಯರು ದೆಹಲಿಗೆ ಆಗಮಿಸಿದ್ದಾರೆ.
ಇತ್ತೀಚೆಗೆ, ನೇಪಾಳದಲ್ಲಿರುವ ಭಾರತದ ರಾಯಭಾರ ಕಚೇರಿಯು ಲುಂಬಿನಿ ಡೆವಲಪ್ಮೆಂಟ್ ಟ್ರಸ್ಟ್ ಮತ್ತು ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಲುಂಬಿನಿಯಲ್ಲಿ ಭಾರತ-ನೇಪಾಳ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿತ್ತು.
“ಉತ್ಸವವು ಭಾರತ ಮತ್ತು ನೇಪಾಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸಿದೆ, ಬೌದ್ಧಧರ್ಮದ ಮೇಲೆ ಇದು ಕೇಂದ್ರೀಕರಿಸಿದೆ. ಉತ್ಸವವು ಭಾರತದ ಲಡಾಖ್ನಲ್ಲಿರುವ ಹೆಮಿಸ್ ಮಠದ ಸನ್ಯಾಸಿ ಕಲಾವಿದರು ಸಿದ್ಧಪಡಿಸಿದ ಮರಳು ಮಂಡಲ ಡ್ರಾಯಿಂಗ್ ಆರ್ಟ್ ಪ್ರದರ್ಶನವನ್ನು ಒಳಗೊಂಡಿತ್ತು, ಛಾಯಾಚಿತ್ರಗಳನ್ನು ಆಧರಿಸಿದ ಫೋಟೋ ಪ್ರದರ್ಶನ ಹೆಸರಾಂತ ಛಾಯಾಗ್ರಾಹಕ ಬೆನೊಯ್ ಬೆಹ್ಲ್ ನಡೆಸಿಕೊಟ್ಟರು. ಭಾರತೀಯ ಮತ್ತು ನೇಪಾಳಿ ಪಾಕಪದ್ಧತಿಗಳನ್ನು ಒಳಗೊಂಡ ಬೀದಿ ಆಹಾರ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು” ಎಂದು ಭಾರತೀಯ ರಾಯಭಾರ ಕಚೇರಿಯ ಪ್ರಕಟಣೆ ತಿಳಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ಬೌದ್ಧ ಪರಂಪರೆಯ ತಾಣಗಳ ಅತ್ಯದ್ಭುತ ಛಾಯಾಚಿತ್ರಗಳ ಸಂಗ್ರಹವನ್ನು ಒಳಗೊಂಡ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಸಹ ಒಳಗೊಂಡಿತ್ತು.
ಈ ಪ್ರದರ್ಶನವು ಪ್ರಾಚೀನ ಕಾಲದಿಂದ ಇಂದಿನವರೆಗೆ ಬೌದ್ಧಧರ್ಮದ ಸ್ಮಾರಕಗಳು ಮತ್ತು ಕಲಾ ಪರಂಪರೆಯ ಸಮಗ್ರ ದೃಷ್ಟಿಕೋನವನ್ನು ಒದಗಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.