ವಾಷಿಂಗ್ಟನ್: ಮುಂದಿನ ತಿಂಗಳು ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಸ್ಮರಣಾರ್ಥವಾಗಿ ಅಮೆರಿಕಾದ್ಯಂತದ ದೇಗುಲಗಳಲ್ಲಿ ಒಂದು ವಾರದ ಆಚರಣೆಗಳನ್ನು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
“ನಾವು ಈ ವಿದ್ಯಮಾನದ ಭಾಗವಾಗಿರುವುದು ನಮ್ಮ ಅದೃಷ್ಟ ಮತ್ತು ಆಶೀರ್ವಾದ ಮತ್ತು ಶತಮಾನಗಳ ಕಾಯುವಿಕೆ ಮತ್ತು ಹೋರಾಟದ ನಂತರ ನಮ್ಮ ಕನಸಿನ ದೇವಾಲಯವು ಸಾಕಾರಗೊಳ್ಳುತ್ತಿದೆ. ಯುಎಸ್ ಮತ್ತು ಕೆನಡಾದಲ್ಲಿ ಪ್ರತಿಯೊಬ್ಬರ ಭಾವನೆಗಳು ತುಂಬಿ ಬಂದಿವೆ. ಶ್ರದ್ಧಾ ಭಕ್ತಿಯಿಂದ ದೇಗುಲ ನಿರ್ಮಿಸಲಾಗಿದೆ ಮತ್ತು ಎಲ್ಲರೂ ಭಗವಾನ್ ಶ್ರೀರಾಮನನ್ನು ಅವನ ಮಂದಿರದಲ್ಲಿ ಸ್ವೀಕರಿಸಲು ಕಾತುರದಿಂದ ಕಾಯುತ್ತಿದ್ದಾರೆ” ಎಂದು ಹಿಂದೂ ಮಂದಿರಗಳ ಸಬಲೀಕರಣ ಮಂಡಳಿ (ಎಚ್ಎಂಇಸಿ)ಯ ತೇಜಲ್ ಶಾ ತಿಳಿಸಿದ್ದಾರೆ.
ಹಿಂದೂ ಮಂದಿರಗಳ ಸಬಲೀಕರಣ ಮಂಡಳಿ (HMEC) ಯುನೈಟೆಡ್ ಸ್ಟೇಟ್ಸ್ನಲ್ಲಿರುವ 1,100 ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ಉನ್ನತ ಸಂಸ್ಥೆಯಾಗಿದೆ.
ಉತ್ತರ ಅಮೆರಿಕಾದ ಸಣ್ಣ ಮತ್ತು ದೊಡ್ಡ ದೇವಾಲಯಗಳಲ್ಲಿ ವಾರಗಳ ಅವಧಿಯ ಆಚರಣೆಗಳು ಜನವರಿ 15 ರಂದು ಪ್ರಾರಂಭವಾಗಲಿದ್ದು, ಜನವರಿ 20 ರ ರಾತ್ರಿ ಅಯೋಧ್ಯೆಯಿಂದ ರಾಮಮಂದಿರ ಉದ್ಘಾಟನೆಯ ನೇರ ಪ್ರಸಾರದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.