ನವದೆಹಲಿ: ಭಾರೀ ಮಳೆಯು ತಮಿಳುನಾಡಿನ ಹಲವು ಜಿಲ್ಲೆಗಳನ್ನು ಜರ್ಜರಿತಗೊಳಿಸಿದೆ ಮತ್ತು ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಭಾರಿ ಪ್ರವಾಹಕ್ಕೆ ಸಾಮಾನ್ಯ ಜೀವನ ಅಸ್ತವ್ತಸ್ಥಗೊಂಡಿದೆ. ಭಾರತೀಯ ವಾಯುಪಡೆ, ಸೇನೆ ಮತ್ತು ಇತರ ರಕ್ಷಣಾ ತಂಡಗಳು ಪರಿಹಾರ ಕಾರ್ಯಾಚರಣೆ ನಡೆಸುತ್ತಿವೆ. ಮಳೆಯ ಅನಾಹುತಕ್ಕೆ ಮೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಟುಟಿಕೋರಿನ್ ಜಿಲ್ಲೆಯ ಶ್ರೀವೈಕುಂಟಂ ರೈಲು ನಿಲ್ದಾಣದಲ್ಲಿ ಕಳೆದ 24 ಗಂಟೆಗಳಿಂದ ಸುಮಾರು 500 ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದಾರೆ, ಭಾರೀ ಮಳೆಯ ಕಾರಣ ನಿಲ್ದಾಣವು ಜಲಾವೃತವಾಗಿದೆ ಮತ್ತು ರೈಲು ಹಳಿಗಳು ಹಾನಿಗೊಳಗಾಗಿವೆ. ಭಾರತೀಯ ವಾಯುಪಡೆಯು ಸಿಕ್ಕಿಬಿದ್ದ ರೈಲು ಪ್ರಯಾಣಿಕರಿಗೆ ಏರ್-ಡ್ರಾಪಿಂಗ್ ಪರಿಹಾರ ಸಾಮಗ್ರಿಗಳನ್ನು ಪ್ರಾರಂಭಿಸಿದೆ ಮತ್ತು ಅಸ್ವಸ್ಥ ಪ್ರಯಾಣಿಕರನ್ನು IAF ಚಾಪರ್ಗಳ ಮೂಲಕ ಏರ್ ಲಿಫ್ಟ್ ಮಾಡಲಾಗುತ್ತಿದೆ.
ಭಾರತೀಯ ವಾಯುಪಡೆಯ ಸದರ್ನ್ ಏರ್ ಕಮಾಂಡ್ ತನ್ನ Mi-17 V5 ಹೆಲಿಕಾಪ್ಟರ್ಗಳನ್ನು ಪರಿಹಾರ ಕಾರ್ಯಾಚರಣೆಯಲ್ಲಿ ನಿಯೋಜಿಸಿದೆ. ಮಾನವೀಯ ನೆರವು ವಿಪತ್ತು ಪರಿಹಾರ (ಎಚ್ಎಡಿಆರ್) ಕಾರ್ಯಾಚರಣೆಗಾಗಿ ಸೂಲೂರು ಏರ್ ಫೋರ್ಸ್ ಸ್ಟೇಷನ್ ಕಾರ್ಯನಿರ್ವಹಿಸುತ್ತಿದೆ. ವಾಯುಪಡೆಯು ತಿರುನೆಲ್ವೇಲಿ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಆಹಾರ ಮತ್ತು ವೈದ್ಯಕೀಯ ಪ್ಯಾಕೇಜ್ಗಳನ್ನು ಹೆಲಿಕಾಫ್ಟರ್ನಿಂದ ಕೆಳಗೆ ಬೀಳಿಸುತ್ತಿದೆ.
ತೂತುಕುಡಿಯ ವಾಸವಪ್ಪಪುರಂ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಭಾರತೀಯ ಸೇನೆ ರಕ್ಷಿಸಿದೆ. ಈ ಪ್ರದೇಶದ ಸುಮಾರು 118 ಜನರನ್ನು ರಕ್ಷಿಸಲಾಗಿದೆ ಎಂದು ವರದಿಗಳು ತಿಳಿಸಿವ
On 18 Dec 2023,Tamil Nadu
received unprecedented rains in last 24 hours,that has caused extensive
flooding in Tirunelveli and Thoothukudi districts.IAF responded swiftly and tasked AF Station Sulur for an HADR Ops which is
currently being undertaken by MI -17 V5 helicopter . pic.twitter.com/uzlOxsNsvu— SAC_IAF (@IafSac) December 18, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.