ನವದೆಹಲಿ: ಗಾಜಾದಲ್ಲಿ ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ತಕ್ಷಣದ ಮಾನವೀಯ ಕದನ ವಿರಾಮ ಘೋಷಿಸಬೇಕು ಎಂದು ಒತ್ತಾಯಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿದ ಕರಡು ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ.
ಈಜಿಪ್ಟ್ ಮಂಡಿಸಿದ ನಿರ್ಣಯವನ್ನು ಮಂಗಳವಾರ ಅಂಗೀಕರಿಸಲಾಯಿತು, ಪರವಾಗಿ 153 ಮತಗಳು, ವಿರುದ್ಧ 10 ಮತ್ತು 23 ಗೈರು ಹಾಜರಾದವು. ನಿರ್ಣಯವು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ ಮತ್ತು ಎಲ್ಲಾ ಪಕ್ಷಗಳು ತಮ್ಮ ಅಂತರರಾಷ್ಟ್ರೀಯ ಜವಾಬ್ದಾರಿಗಳನ್ನು ಅನುಸರಿಸಲು ಕರೆ ನೀಡಿದೆ, ವಿಶೇಷವಾಗಿ ನಾಗರಿಕರನ್ನು ರಕ್ಷಿಸಲು ಮತ್ತು ಗಾಜಾಕ್ಕೆ ಪರಿಹಾರಕ್ಕಾಗಿ ಮಾನವೀಯ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿದೆ. ಆದರೆ ಇದರಲ್ಲಿ ಹಮಾಸ್ ಉಲ್ಲೇಖವಿಲ್ಲ.
ಅಲ್ಜೀರಿಯಾ, ಬಹರೈನ್, ಇರಾಕ್, ಕುವೈಟ್, ಕತಾರ್, ಒಮಾನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೈಟ್ಸ್ , ಪ್ಯಾಲೆಸ್ತೇನ್ ಬೆಂಬಲದೊಂದಿಗೆ ಈ ನಿರ್ಣಯ ಮಂಡನೆಯಾಗಿದೆ.
ಗಾಜಾ ಎದುರಿಸುತ್ತಿರುವ ಬಹು ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಸಮುದಾಯವು ಸಾಮಾನ್ಯ ನೆಲೆಯನ್ನು ಕಂಡುಕೊಂಡಿರುವುದನ್ನು ಭಾರತ ಸ್ವಾಗತಿಸುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.