ನವದೆಹಲಿ: ಗುಜರಾತಿನ ಗರ್ಬಾವನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಬೋಟ್ಸ್ವಾನಾದ ಕಸಾನೆಯಲ್ಲಿರುವ ಕ್ರೆಸ್ಟಾ ಮೊವಾನಾ ರೆಸಾರ್ಟ್ನಲ್ಲಿ ನಡೆಯುತ್ತಿರುವ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಅಂತರ್ ಸರ್ಕಾರಿ ಸಮಿತಿಯ 18 ನೇ ಅಧಿವೇಶನದಲ್ಲಿ ಗಾರ್ಬಾವನ್ನು ಅಮೂರ್ತ ಪರಂಪರೆ ಎಂದು ಘೋಷಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ನಮ್ಮ ಶ್ರೀಮಂತ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ಜಗತ್ತಿಗೆ ಸಾರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಾಡುತ್ತಿರುವ ಅವಿರತ ಪ್ರಯತ್ನಗಳಿಗೆ ಈ ಪಟ್ಟಿಯು ಸಾಕ್ಷಿಯಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಹೇಳಿದ್ದಾರೆ.
ಗುಜರಾತ್ನ ಗರ್ಬಾ ಈ ಪಟ್ಟಿಗೆ ಸೇರುತ್ತಿರುವ ಭಾರತದ 15 ನೇ ವಿಷಯವಾಗಿದೆ.
ಗರ್ಬಾ ಜೀವನ, ಏಕತೆ ಮತ್ತು ಭಾರತದ ಆಳವಾಗಿ ಬೇರೂರಿರುವ ಸಂಪ್ರದಾಯಗಳ ಆಚರಣೆಯಾಗಿದೆ ಮತ್ತು ಅಮೂರ್ತ ಪರಂಪರೆಯ ಪಟ್ಟಿಯಲ್ಲಿರುವ ಅದರ ಸೇರ್ಪಡೆ ಭಾರತೀಯ ಸಂಸ್ಕೃತಿಯ ಸೌಂದರ್ಯವನ್ನು ಜಗತ್ತಿಗೆ ತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಗೌರವವು ಎಲ್ಲಾ ದೇಶವಾಸಿಗಳಿಗೆ ದೇಶದ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರೇರೇಪಿಸುತ್ತದೆ. ಈ ಜಾಗತಿಕ ಮನ್ನಣೆಗಾಗಿ ಅವರು ಎಲ್ಲರಿಗೂ ಅಭಿನಂದನೆಗಳು ಎಂದಿದ್ದಾರೆ.
ಗುಜರಾತಿನ ಗರ್ಬಾವನ್ನು ಯುನೆಸ್ಕೋ ಒಂದು ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಘೋಷಿಸಿರುವುದು ಪ್ರಪಂಚದಾದ್ಯಂತ ವಾಸಿಸುವ ಎಲ್ಲಾ ಗುಜರಾತಿಗಳಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಅಲ್ಲಿನ ಸಿಎಂ ಹೇಳಿದ್ದಾರೆ.
🔴 BREAKING
New inscription on the #IntangibleHeritage List: Garba of Gujarat, #India 🇮🇳.
Congratulations!https://t.co/c2HMPpStCA #LivingHeritage pic.twitter.com/YcupgYLFjg
— UNESCO 🏛️ #Education #Sciences #Culture 🇺🇳 (@UNESCO) December 6, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.