ನವದೆಹಲಿ: ಜ್ವಾಲಾಮುಖಿ ಸ್ಫೋಟದ ಹಿನ್ನೆಲೆಯಲ್ಲಿ ಭಾರತವು ಪಪುವಾ ನ್ಯೂ ಗಿನಿಯಾಕ್ಕೆ ತಕ್ಷಣದ ಒಂದು ಮಿಲಿಯನ್ ಡಾಲರ್ ಪರಿಹಾರ ನೆರವು ಘೋಷಿಸಿದೆ. ನವೆಂಬರ್ 20 ರಂದು, ಪಪುವಾ ನ್ಯೂ ಗಿನಿಯಾದ ಉಲಾವುನ್ ಪರ್ವತದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟವು 26 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಗೊಳ್ಳುವಂತೆ ಮಾಡಿದೆ ಮತ್ತು ತುರ್ತು ಮಾನವೀಯ ಅಗತ್ಯಗಳನ್ನು ಸೃಷ್ಟಿಸಿದೆ.
ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರಕ್ಕಾಗಿನ ವೇದಿಕೆಯ ಅಡಿಯಲ್ಲಿ ನಿಕಟ ಸ್ನೇಹಿತ ಮತ್ತು ಅಭಿವೃದ್ಧಿ ಪಾಲುದಾರನಾಗಿ ಭಾರತವು ಪಪುವಾ ನ್ಯೂಗಿನಿಯಾಕ್ಕೆ ಪರಿಹಾರ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಪ್ರಯತ್ನಗಳನ್ನು ಬೆಂಬಲಿಸಲು ತಕ್ಷಣದ ಪರಿಹಾರ ಸಹಾಯವನ್ನು ವಿಸ್ತರಿಸಿದೆ. ವಿಪತ್ತಿನಿಂದ ಉಂಟಾದ ಹಾನಿ ಮತ್ತು ವಿನಾಶಕ್ಕಾಗಿ ಪಪುವಾ ನ್ಯೂಗಿನಿಯಾ ಸರ್ಕಾರಕ್ಕೆ ಮತ್ತು ಜನರಿಗೆ ಭಾರತವು ಸಹಾನುಭೂತಿ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
2018 ರಲ್ಲಿ ಭೂಕಂಪ ಮತ್ತು 2019 ರಲ್ಲಿ ಜ್ವಾಲಾಮುಖಿ ಸ್ಫೋಟ ಸೇರಿದಂತೆ ನೈಸರ್ಗಿಕ ವಿಕೋಪಗಳಿಂದ ಉಂಟಾದ ಬಿಕ್ಕಟ್ಟು ಮತ್ತು ವಿನಾಶದ ಸಮಯದಲ್ಲಿ ಭಾರತವು ಪಪುವಾ ನ್ಯೂಗಿನಿಯಾದ ಪರವಾಗಿ ದೃಢವಾಗಿ ನಿಂತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.