ನವದೆಹಲಿ: ಭಾರತದಲ್ಲಿನ 6,44,131 ಹಳ್ಳಿಗಳ ಪೈಕಿ ಸುಮಾರು 6,16,300 ಹಳ್ಳಿಗಳು ಮೊಬೈಲ್ ಸಂಪರ್ಕ ಹೊಂದಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ದೇಶದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಹೆಚ್ಚಿಸಲು ಸರ್ಕಾರ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಸುಮಾರು 738 ಜಿಲ್ಲೆಗಳಲ್ಲಿ 3.99 ಲಕ್ಷ ಬೇಸ್ ಟ್ರಾನ್ಸ್-ರಿಸೀವರ್ಸ್ ಸ್ಟೇಷನ್ (BTS) ಅನ್ನು ನಿಯೋಜಿಸುವುದರೊಂದಿಗೆ ಭಾರತವು ವಿಶ್ವದಲ್ಲೇ 5G ಸೇವೆಗಳ ವೇಗದ ರೋಲ್ಔಟ್ ಅನ್ನು ಕಂಡಿದೆ ಎಂದರು.
2014ರ ಮಾರ್ಚ್ನಲ್ಲಿ 6.49 ಲಕ್ಷ ಇದ್ದ ಬಿಟಿಎಸ್ ಈ ವರ್ಷದ ಮಾರ್ಚ್ನಲ್ಲಿ 24.42 ಲಕ್ಷಕ್ಕೆ ಏರಿಕೆಯಾಗಿದೆ ಎಂದರು. ಇಂಟರ್ನೆಟ್ ಬಳಕೆದಾರರ ಸಂಖ್ಯೆ ಮಾರ್ಚ್ 2014 ರಲ್ಲಿ 25.15 ಕೋಟಿಯಿಂದ ಮಾರ್ಚ್ 2023 ರಲ್ಲಿ 88.22 ಕೋಟಿಗೆ ಏರಿದೆ. ಡೇಟಾದ ವೆಚ್ಚವು ಮಾರ್ಚ್ 2014 ರಲ್ಲಿ ಪ್ರತಿ GB ಗೆ 269 ರೂಪಾಯಿಗಳಿಂದ ಈ ವರ್ಷದ ಮಾರ್ಚ್ನಲ್ಲಿ 9 ರೂಪಾಯಿ 94 ಪೈಸೆ ಕಡಿಮೆಯಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.