ನವದೆಹಲಿ: ಪ್ರತಿಪಕ್ಷಗಳು ತಮ್ಮ ದುರಹಂಕಾರ, ಸುಳ್ಳು, ನಿರಾಶಾವಾದ ಮತ್ತು ಅಜ್ಞಾನದಿಂದ ಹೊರ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇಂಡಿಯಾ ಟುಡೇಯಲ್ಲಿ ಶಿವ ಆರೂರ್ ಅವರ ಸುದ್ದಿ ವಿಶ್ಲೇಷಣೆಯ ವೀಡಿಯೊ ತುಣುಕಿಗೆ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಮೋದಿ,
“ಪ್ರತಿಪಕ್ಷಗಳು ತಮ್ಮ ದುರಹಂಕಾರ, ಸುಳ್ಳು, ನಿರಾಶಾವಾದ ಮತ್ತು ಅಜ್ಞಾನದಿಂದಾಗಿ ಸಂತೋಷವಾಗಿದ್ದಾರೆ. ಆದರೆ ಅವರ ವಿಭಜನೆಯ ಅಜೆಂಡಾದ ಬಗ್ಗೆ ಜನರು ಎಚ್ಚರದಿಂದಿರಿ. 70 ವರ್ಷಗಳ ಹಳೆಯ ಅಭ್ಯಾಸವು ಅಷ್ಟು ಸುಲಭವಾಗಿ ಹೋಗಲಾರದು” ಎಂದು ಮೋದಿ ಮಂಗಳವಾರ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭವಿಷ್ಯದಲ್ಲಿ ಇಂತಹ ಹಲವಾರು ಸೋಲುಗಳಿಗೆ ಸಿದ್ಧರಾಗಿರಬೇಕು ಎಂದು ಪ್ರಧಾನಿ ಪ್ರತಿಪಕ್ಷಗಳ ವಿರುದ್ಧ ಚಟಾಕಿ ಹಾರಿಸಿದರು.
ಚುನಾವಣಾ ಫಲಿತಾಂಶದ ದಿನದಂದು ತಮ್ಮ ವಿಜಯೋತ್ಸವ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು, ಒಂದು ಹಂತದಲ್ಲಿ ಒಟ್ಟಾಗಿ ಬಂದರೂ, ಎಷ್ಟೇ ಚೆನ್ನಾಗಿ ಫೋಟೋ ಕ್ಲಿಕ್ಕಿಸಿದರೂ ಜನರ ನಂಬಿಕೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ಈ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಮತ್ತು ಅದರ ದುರಹಂಕಾರಿ ಮೈತ್ರಿ ಪಕ್ಷಗಳಿಗೂ ಕಲಿಕೆಯ ಅನುಭವವಾಗಿದೆ. ಕೆಲವು ವಂಶಾಡಳಿತ ಪಕ್ಷಗಳು ಒಂದು ಹಂತದಲ್ಲಿ ಒಗ್ಗೂಡಿದರೂ ಎಷ್ಟೇ ಚೆನ್ನಾಗಿ ಫೋಟೋ ಕ್ಲಿಕ್ಕಿಸಿದರೂ, ನೀವು ದೇಶದ ನಂಬಿಕೆಯನ್ನು ಗೆಲ್ಲಲು ಸಾಧ್ಯವಿಲ್ಲ” ಎಂದು ಪ್ರಧಾನಿ ಹೇಳಿದರು.
May they be happy with their arrogance, lies, pessimism and ignorance. But..
⚠️ ⚠️ ⚠️ ⚠️ Beware of their divisive agenda. An old habit of 70 years can’t go away so easily. ⚠️ ⚠️ ⚠️ ⚠️
Also, such is the wisdom of the people that they have to be prepared for many more meltdowns… https://t.co/N3jc3eSgMB
— Narendra Modi (@narendramodi) December 5, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.