ರಾಯ್ಪುರ: ಛತ್ತೀಸ್ಗಢದಲ್ಲಿ ಬಿಜೆಪಿ ಸ್ಪಷ್ಟ ಬಹುತದೊಂದಿಗೆ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಹಿರಿಯ ನಾಯಕ ರಮಣ್ ಸಿಂಗ್ ಅವರು, ಇದು ಮೋದಿಜಿಯವರ ಗ್ಯಾರಂಟಿಗೆ ದೊರೆತ ಜಯ ಎಂದು ಒತ್ತಿ ಹೇಳಿದರು.
ಛತ್ತೀಸ್ಗಢದ ಫಲಿತಾಂಶದ ಟ್ರೆಂಡ್ ಆರಂಭದೊಂದಲೂ ಭಾರೀ ಕುತೂಹಲ ಕೆರಳಿಸಿದೆ. ಬೆಳಗ್ಗೆ 11 ಗಂಟೆಯವರೆಗೂ ಕಾಂಗ್ರೆಸ್ ಮುನ್ನಡೆಯಲ್ಲಿತ್ತು. ಆದರೆ ಬಳಿಕ ಬಿಜೆಪಿ ಮುನ್ನಡೆ ಕಾಯ್ದುಕೊಂಡು ಮುಂದಕ್ಕೆ ಸಾಗಿತು.
ಛತ್ತೀಸ್ಗಢದ 90 ಸದಸ್ಯ ಬಲದ ವಿಧಾನಸಭೆಗೆ 46 ಸರಳ ಬಹುಮತಕ್ಕೆ ಬೇಕಾದ ಸಂಖ್ಯೆಯಾಗಿದೆ. ಬಿಜೆಪಿ 55ರಲ್ಲಿ ಮುನ್ನಡೆಯನ್ನು ಸಾಧಿಸಿ ಮುನ್ನುಗ್ಗುತ್ತಿದೆ.
“ಜನರು ಮೋದಿಜಿಯವರ ಗ್ಯಾರಂಟಿಯನ್ನು ನಂಬಿದ್ದಾರೆ, ಅದನ್ನೇ ಫಲಿತಾಂಶದ ಟ್ರೆಂಡ್ಗಳು ತೋರಿಸುತ್ತಿವೆ. ನಾವು ಅಂಡರ್ಕರೆಂಟ್ ಅನ್ನು ನೋಡಿದ್ದೇವೆ, ಅದು ಇಷ್ಟು ದೊಡ್ಡದಾಗಿದೆ ಎಂದು ತಿಳಿದಿರಲಿಲ್ಲ. ಭೂಪೇಶ್ ಬಘೇಲ್ ಅವರನ್ನು ಛತ್ತೀಸ್ಗಢ ತಿರಸ್ಕರಿಸಿದೆ. ಭೂಪೇಶ್ ಬಾಘೇಲ್ ಅವರ ಭ್ರಷ್ಟಾಚಾರ, ಮದ್ಯ ಹಗರಣ, ಮಹದೇವ್ ಆ್ಯಪ್ ಹಗರಣವು ಅವರ ಸೋಲಿಗೆ ಕೊಡುಗೆ ನೀಡಿದೆ. ಇದು ನಿಜವಾದ ಫಲಿತಾಂಶವಾಗಿದೆ” ಎಂದು ರಮಣ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದಕ್ಕೆ ಉತ್ತರಿಸಿದ ಅವರು, “ಇದು ಪಕ್ಷದ ನಿರ್ಧಾರವಾಗಿರುತ್ತದೆ, ನಾನು ಎಂದಿಗೂ ಏನನ್ನೂ ಕೇಳಲಿಲ್ಲ, ನನಗೆ ನಿಯೋಜಿಸಲಾದ ಯಾವುದೇ ಕೆಲಸವನ್ನು ಸಮರ್ಪಣೆಯಿಂದ ಮಾಡಿದ್ದೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.