ನವದೆಹಲಿ: ನಕಲಿ ವಿಷಯಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿರುವ 9 ಯುಟ್ಯೂಬ್ ಚಾನಲ್ಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಪ್ರೆಸ್ ಇನ್ಫಾರ್ಮೆಶನ್ ಬ್ಯುರೊದ (PIB) ಫ್ಯಾಕ್ಟ್ ಚೆಕ್ ವಿಭಾಗ, ಸುಳ್ಳು ಸುದ್ದಿಗಳನ್ನು ಹರಡುವ 9 ಯುಟ್ಯೂಬ್ ಚಾನಲ್ಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ. ಈ ಕುರಿತು ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಟ್ವಿಟರ್ ನಲ್ಲಿ ನೀಡಿರುವ ಮಾಹಿತಿ ಅನ್ವಯ ಸರ್ಕಾರಿ ಯೋಜನಾ ಅಫೀಶಯಲ್, ಸಂಸಾನಿ ಲೈವ್, ಬಜರಂಗ್ ಎಜುಕೇಶನ್, ಆಪ್ಕೆ ಗುರೂಜಿ, ಬಿಜೆ ನ್ಯೂಸ್, ಅಬ್ ಬೊಲೆಗಾ ಭಾರತ್, ಜಿವಿಟಿ ನ್ಯೂಸ್, ಡೈಲಿ ಸ್ಟಡಿ, ಭಾರತ್ ಏಕತಾ ನ್ಯೂಸ್ ಎಂಬ 9 ಯುಟ್ಯೂಬ್ ಚಾನಲ್ಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಆರೋಪಿಸಲಾಗಿದೆ.
ಈ ಎಲ್ಲ 9 ಯುಟ್ಯೂಬ್ ಚಾನಲ್ಗಳು 83 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿವೆ ಎಂದು ಹೇಳಲಾಗಿದೆ. ಈ ಪೈಕಿ ಆಪ್ಕೆ ಗುರೂಜಿ ಮತ್ತು ಬಜರಂಗ್ ಎಜುಕೇಶನ್ ಚಾನಲ್ ಗಳು ಕ್ರಮವಾಗಿ 34 ಲಕ್ಷ ಮತ್ತು 24 ಲಕ್ಷ ಚಂದಾದಾರರನ್ನು ಹೊಂದಿವೆ.
ಇವುಗಳನ್ನು ತಮ್ಮ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಲು ದೇಶದ ಪ್ರಮುಖ ವಿಷಯಗಳ ಬಗ್ಗೆ ಸುಳ್ಳುಗಳನ್ನು ಹರಡುತ್ತಿವೆ ಮತ್ತು ಸುಳ್ಳುಗಳನ್ನು ವೈಭವೀಕರಿಸುತ್ತಿದೆ ಎಂದು ಆರೋಪಿಸಲಾಗಿದೆ.
'Sarkari Yojna Official' नामक एक #YouTube चैनल पर केंद्र सरकार की योजनाओं से संबंधित फ़र्ज़ी खबरें फैलाई जा रही हैं।
इस चैनल के 1 लाख सब्सक्राइबर और 29 लाख से अधिक व्यूज हैं।#PIBFactCheck
अधिक जानने के लिए देखें यह थ्रेड 👇 pic.twitter.com/6444UkZdra
— PIB Fact Check (@PIBFactCheck) December 1, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.