ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷೆಯ ಸೌರ ಮಿಷನ್ ಆದಿತ್ಯ ಎಲ್1 ತನ್ನ ಸೂರ್ಯನನ್ನು ಅಧ್ಯಯನ ಮಾಡುವ ತನ್ನ ಕಾರ್ಯವನ್ನು ಆರಂಭಿಸಿದೆ. ಸೌರ ಮಾರುತಗಳ ಅವಲೋಕನ ಕಾರ್ಯವನ್ನು ಆರಂಭಿಸಿದೆ.
ಸೂರ್ಯನ ಕುರಿತಾದ ಅಧ್ಯಯನಕ್ಕಾಗಿ ಉಡಾವಣೆ ಮಾಡಿರುವ ಭಾರತದ ಮಹತ್ವಾಕಾಂಕ್ಷಿ ಆದಿತ್ಯ ಎಲ್1 ನೌಕೆಯು ಇಂದಿನಿಂದ ಸೌರ ಮಾರುತಗಳ ಅವಲೋಕನ ಕಾರ್ಯ ಆರಂಭಿಸಿದೆ. ಉಪಗ್ರಹದಲ್ಲಿನ ಆದಿತ್ಯ ಸೌರ ಮಾರುತ ಕಣ ಪ್ರಯೋಗ (ಎಎಸ್ಪಿಇಎಕ್ಸ್) ಪೇಲೋಡ್ ತನ್ನ ಕಾರ್ಯಾಚರಣೆ ಆರಂಭಿಸಿದೆ ಮತ್ತು ಸಹಜವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಎಎಸ್ಪಿಎಇಎಕ್ಸ್ ಎರಡು ಸಾಧನಗಳನ್ನು ಹೊಂದಿದೆ. ಒಂದು ಸೋಲಾರ್ ವಿಂಡ್ ಅಯಾನ್ ಸ್ಪೆಕ್ಟ್ರೋಮೀಟರ್ (ಎಸ್ಡಬ್ಲ್ಯೂಐಎಸ್), ಮತ್ತೊಂದು ಸುಪ್ರಾ ಥರ್ಮಲ್ ಆಂಡ್ ಎನೆರ್ಜೆಟಿಕ್ ಪರ್ಟಿಕಲ್ ಸ್ಪೆಕ್ಟ್ರೋಮೀಟರ್ (ಎಸ್ಟಿಇಪಿಎಸ್). ಎಸ್ಟಿಇಪಿಎಸ್ ಅಥವಾ ಸ್ಟೆಪ್ಸ್, ಸೆಪ್ಟೆಂಬರ್ 10ರಂದೇ ಕಾರ್ಯಾಚರಣೆಗೆ ಸಕ್ರಿಯಗೊಂಡಿತ್ತು. ಎಸ್ಡಬ್ಲ್ಯೂಐಎಸ್ ಅಥವಾ ಸ್ವಿಸ್ ಸಾಧನವು ಶನಿವಾರ ಸಕ್ರಿಯಗೊಂಡಿದ್ದು, ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.