ಲಂಡನ್: ಕಳೆದ ರಾತ್ರಿ ಲಂಡನ್ನಲ್ಲಿ ನಡೆದ ಸಮಾರಂಭದಲ್ಲಿ ಐರಿಶ್ ಬರಹಗಾರ ಪಾಲ್ ಲಿಂಚ್ ಅವರು ತಮ್ಮ ‘ಪ್ರಾಫೆಟ್ ಸಾಂಗ್’ ಕಾದಂಬರಿಗಾಗಿ 2023 ರ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಲಂಡನ್ ಮೂಲದ ಭಾರತೀಯ ಸಂಜಾತ ಲೇಖಕಿ ಚೇತನಾ ಮಾರೂ ಅವರ ಚೊಚ್ಚಲ ಕಾದಂಬರಿ “ವೆಸ್ಟರ್ನ್ ಲೇನ್” ಅನ್ನು ಹಿಂದಿಕ್ಕಿ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಲಂಡನ್ನ ಓಲ್ಡ್ ಬಿಲ್ಲಿಂಗ್ಗೇಟ್ಸ್ನಲ್ಲಿ ನಡೆದ ಸಮಾರಂಭದಲ್ಲಿ ಲಿಂಚ್ ಅವರಿಗೆ ಕಳೆದ ವರ್ಷದ ಬೂಕರ್ ಪ್ರಶಸ್ತಿ ವಿಜೇತ ಶ್ರೀಲಂಕಾದ ಶೆಹನ್ ಕರುಣಾತಿಲಕ ಅವರು ಟ್ರೋಫಿ ಮತ್ತು 50 ಸಾವಿರ ಪೌಂಡ್ ನಗದನ್ನು ಹಸ್ತಾಂತರಿಸಿದರು.
46 ವರ್ಷದ ಲಿಂಚ್ ಅವರು ಐರ್ಲೆಂಡ್ನ ದುರ್ಬಲ ವರ್ಗವನ್ನು ನಿರಂಕುಶಾಧಿಕಾರದ ಹಿಡಿತದಲ್ಲಿ ಪ್ರಸ್ತುತಪಡಿಸುವ ತಮ್ಮ ಕಾದಂಬರಿಗಾಗಿ ಬೂಕರ್ ಗೆದ್ದರು. ಈ ಹಿಂದೆ ಐರ್ಲೆಂಡ್ನ ಸಂಡೇ ಟ್ರಿಬ್ಯೂನ್ ಪತ್ರಿಕೆಯ ಮುಖ್ಯ ಚಲನಚಿತ್ರ ವಿಮರ್ಶಕರಾಗಿ ಪಾಲ್ ಲಿಂಚ್ ಕೆಲಸ ಮಾಡಿದ್ದಾರೆ. ಇವರು ಬೂಕರ್ ಗೆದ್ದ ಐದನೇ ಐರಿಶ್ ವ್ಯಕ್ತಿಯಾಗಿದ್ದಾರೆ.
🏆 Announcing the winner of the #BookerPrize2023: Prophet Song by Paul Lynch! (@paullynchwriter) Huge congratulations on winning this landmark prize.
Grab a copy from your local independent bookshop in person, or support them here with free delivery: https://t.co/py8PTi2GmY pic.twitter.com/lvmvKDJI7V
— Bookshop.org (@bookshop_org_UK) November 26, 2023
Thrilled this has won. A brilliant, brilliant book. #BookerPrize2023 https://t.co/AyuFCX3fE5
— Simon Savidge (@SavidgeReads) November 26, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.