
ನವದೆಹಲಿ: ಈ ವರ್ಷದ ಡಿಸೆಂಬರ್ 1 ರಿಂದ ತನ್ನ ರಾಷ್ಟ್ರಕ್ಕೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ಮಲೇಷ್ಯಾ ವೀಸಾ ಮುಕ್ತ ಪ್ರವೇಶವನ್ನು ಕಲ್ಪಿಸುತ್ತಿದೆ. ಹೀಗಾಗಿ ಮುಂದಿನ ತಿಂಗಳಿನಿಂದ ಭಾರತೀಯರು ವೀಸಾ ಇಲ್ಲದೆಯೇ ಮಲೇಷ್ಯಾಗೆ ಒಂದು ತಿಂಗಳುಗಳ ಕಾಲ ಭೇಟಿಕೊಡಬಹುದು. 30 ದಿನದವರೆಗೆ ವೀಸಾ ಅವಶ್ಯಕತೆಗಳನ್ನು ಆ ದೇಶ ಭಾರತೀಯರಿಗೆ ರದ್ದುಗೊಳಿಸುತ್ತಿದೆ.
ಈಗ, ಭಾರತೀಯ ಪ್ರಜೆಗಳು ಮಲೇಷ್ಯಾದಲ್ಲಿ 30 ದಿನಗಳವರೆಗೆ ವೀಸಾ ಮುಕ್ತವಾಗಿ ಉಳಿಯಬಹುದು. ನಿನ್ನೆ ಪುತ್ರಜಯದಲ್ಲಿ ನಡೆದ ಪೀಪಲ್ಸ್ ಜಸ್ಟಿಸ್ ಪಾರ್ಟಿಯ ವಾರ್ಷಿಕ ಕಾಂಗ್ರೆಸ್ನಲ್ಲಿ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ತಮ್ಮ ಭಾಷಣದಲ್ಲಿ ಈ ಘೋಷಣೆ ಮಾಡಿದರು. ಭಾರತೀಯ ನಾಗರಿಕರ ಜೊತೆಗೆ, ಚೀನಾದ ಪ್ರಜೆಗಳಿಗೂ ಡಿಸೆಂಬರ್ 1 ರಿಂದ ವೀಸಾ ಮುಕ್ತ ಪ್ರವೇಶವನ್ನು ಅನುಮತಿಸಲಾಗುತ್ತದೆ.
ಮಲೇಷ್ಯಾವು ಹೆಚ್ಚುವರಿ ಪ್ರವಾಸಿಗರ ಆಗಮನ ಮತ್ತು ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆದ. ಅನ್ವರ್ ಕಳೆದ ತಿಂಗಳು ಪ್ರವಾಸಿಗರು ಮತ್ತು ಹೂಡಿಕೆದಾರರ ಪ್ರವೇಶವನ್ನು ಉತ್ತೇಜಿಸಲು ವೀಸಾ ಸೌಲಭ್ಯಗಳನ್ನು ಸುಧಾರಿಸುವ ಯೋಜನೆಯನ್ನು ಪ್ರಕಟಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


