ನವದೆಹಲಿ: ಇಂದು ಗುರು ತೇಗ್ ಬಹದ್ದೂರ್ ಅವರ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ. ಸಿಖ್ಖರ ಒಂಬತ್ತನೇ ಗುರು ಆಗಿದ್ದ ಇವರು ಮೊಘಲರ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದರು. ಇದೇ ಕಾರಣಕ್ಕೆ ಇವರನ್ನು 1675 ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಗಲ್ಲಿಗೇರಿಸಲಾಯಿತು.
ಗುರು ತೇಗ್ ಬಹದ್ದೂರ್ ಅವರು ತಮ್ಮ ಸ್ವಂತ ಜೀವನವನ್ನು ಬಲಿಕೊಟ್ಟು ದುರ್ಬಲರನ್ನು ರಕ್ಷಿಸಲು ತಮ್ಮ ಅನುಯಾಯಿಗಳಿಗೆ ಕಲಿಸಿದರು. ದುರಾಸೆಯನ್ನು ಹೋಗಲಾಡಿಸಲು ಅಧ್ಯಾತ್ಮದ ಹಾದಿಯಲ್ಲಿ ಸಾಗಬೇಕು ಎಂದು ಬೋಧಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರು ತೇಗ್ ಬಹದ್ದೂರ್ ಅವರ ಹುತಾತ್ಮ ದಿನದಂದು ಅವರಿಗೆ ಗೌರವ ಸಲ್ಲಿಸಿದರು. ಮಾನವೀಯ ಮೌಲ್ಯಗಳು ಮತ್ತು ಹಕ್ಕುಗಳ ರಕ್ಷಣೆಗಾಗಿ ಗುರು ತೇಗ್ ಬಹದ್ದೂರ್ ಅವರು ತಮ್ಮ ಜೀವನವನ್ನು ತ್ಯಾಗ ಮಾಡಿದರು ಎಂದು ಸಂದೇಶದಲ್ಲಿ ಮುರ್ಮು ತಿಳಿಸಿದ್ದಾರೆ.
ಅವರ ಬೋಧನೆಗಳು ಮಾನವೀಯತೆಯ ಸೇವೆ ಮಾಡಲು ಮತ್ತು ಎಲ್ಲರ ಐಕ್ಯತೆಯನ್ನು ಉತ್ತೇಜಿಸಲು ನಮಗೆ ಸ್ಫೂರ್ತಿ ನೀಡುತ್ತವೆ ಎಂದು ರಾಷ್ಟ್ರಪತಿ ಹೇಳಿದರು. ಅವರ ಬೋಧನೆಗಳು ನಮ್ಮೆಲ್ಲರಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ತುಂಬುತ್ತದೆ ಎಂದು ರಾಷ್ಟ್ರಪತಿ ಭರವಸೆ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.