ನವದೆಹಲಿ: ಭಾರತ ಮತ್ತು ಲಿಥುವೇನಿಯಾ ಗುರುವಾರ ನವದೆಹಲಿಯಲ್ಲಿ ಕಡಲ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಸಭೆಯನ್ನು ನಡೆಸಿತು. ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶಾಂತನು ಠಾಕೂರ್ ಮತ್ತು ಲಿಥುವೇನಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪ ಸಚಿವ ಎಜಿಡಿಜಸ್ ಮೈಲುನಾಸ್ ನಡುವೆ ಸಭೆ ನಡೆಯಿತು.
ಭಾರತ ಮತ್ತು ಲಿಥುವೇನಿಯಾ ನಡುವಿನ ಬಲವಾದ ಮತ್ತು ಸೌಹಾರ್ದ ಸಂಬಂಧಕ್ಕೆ ಇಬ್ಬರೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಎರಡೂ ಕಡೆಯವರು ಕ್ಲೈಪೆಡಾಪೋರ್ಟ್ನ ವಿಶಿಷ್ಟ ಪ್ರಯೋಜನವನ್ನು ಚರ್ಚಿಸಿದರು ಎಂದು ಸಚಿವಾಲಯ ಹೇಳಿದೆ. ಬಂದರು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಭಾರತದ ಪರಿಣತಿ ಮತ್ತು ಪೂರ್ವ ಯುರೋಪಿನ ಪ್ರಮುಖ ಕೈಗಾರಿಕಾ ಪ್ರದೇಶಗಳಿಗೆ ಲಿಥುವೇನಿಯಾದ ಕಾರ್ಯತಂತ್ರದ ಸ್ಥಳವನ್ನು ಪರಿಗಣಿಸಿ, ಈ ಕ್ಷೇತ್ರದಲ್ಲಿ ಪರಸ್ಪರ ಸಹಯೋಗದ ಅವಕಾಶವನ್ನು ಅವರು ಎತ್ತಿ ತೋರಿಸಿದರು.
ಭಾರತವು ತನ್ನ ಕಡಲ ಸಾಮರ್ಥ್ಯಗಳನ್ನು ಬಲಪಡಿಸಲು, ವ್ಯಾಪಾರ ದಕ್ಷತೆಯನ್ನು ಹೆಚ್ಚಿಸಲು ಮತ್ತು ಜಾಗತಿಕ ಕಡಲ ಉದ್ಯಮದಲ್ಲಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಲು ಶ್ರಮಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಲಿಥುವೇನಿಯಾಕ್ಕೆ ವಿವಿಧ ಉಪ ವಲಯಗಳಲ್ಲಿ ಭಾರತವು ಹಲವಾರು ಹೂಡಿಕೆ ಅವಕಾಶಗಳನ್ನು ಒದಗಿಸುತ್ತದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.