ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸ್ಕೈ ಡೈವಿಂಗ್ ಮಾಡಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಸೋಮವಾರ ಸ್ಕೈ ಡೈವಿಂಗ್ ಮಾಡಿ ಮೈಸೂರು ಏರ್ಪೋರ್ಟ್ಗೆ 13,000 ಫೀಟ್ ಎತ್ತರದಿಂದ ಜಿಗಿದಿದ್ದಾರೆ. ಈ ಸಾಹಸದ ಮೂಲಕ ಅವರು ಎಕ್ಸ್ಕ್ಲೂಸಿವ್ ಕ್ಲಬ್ ಆಫ್ ಸ್ಕೈಡೈವರ್ಸ್ ಇನ್ ಇಂಡಿಯಾಗೆ ಸೇರ್ಪಡೆಗೊಂಡಿದ್ದಾರೆ.
ಭಾರತದ ರಾಜಕೀಯ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಕೆಲವೇ ಕೆಲವು ಸಂಸದರಲ್ಲಿ ಪ್ರತಾಪ್ ಸಿಂಹ ಒಬ್ಬರಾಗಿದ್ದಾರೆ. ಕೊಡುಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಾಹಸಿ ಪ್ರವಾಸೋದ್ಯಮವನ್ನು ಪ್ರಚುರಪಡಿಸುವ ಸಲುವಾಗಿ ಅವರು ಈ ಸಾಹಸವನ್ನು ಮಾಡಿದ್ದಾರೆ.
ಭೂಮಿಗೆ ಯಶಸ್ವಿಯಾಗಿ ಜಿಗಿದ ಬಳಿಕ ಮಾತನಾಡಿದ ಸಿಂಹ, ’ಏರ್ಕ್ರಾಫ್ಟ್ನಲ್ಲಿ ಕೂತು ಎತ್ತರಕ್ಕೆ ಹಾರಿ ಕೆಳಕ್ಕೆ ಜಿಗಿಯುವಾಗ ತುಸು ಭಯ ಕಾಡಿತ್ತು, ಆದರೆ ಹಾರಿದ ಬಳಿಕ ಗಾಳಿಯಲ್ಲಿ ತೇಲಿದಾಗ ಇದೊಂದು ಜೀವನದ ಅದ್ಭುತ ಅನುಭವ ಎನಿಸಿತು, ಈ ಡೈವ್ ನಂಬಿಕೆಯನ್ನು ಮೀರಿದ ಥ್ರಿಲ್ಲಿಂಗ್ ನೀಡಿದೆ’ ಎಂದರು.
ಅಮೆರಿಕಾದ ತರಬೇತಿದಾರರು ಇವರಿಗೆ ಮಾರ್ಗದರ್ಶನ ನೀಡಿದರು, ಈ ಸ್ಕೈ ಡೈವಿಂಗನ್ನು ಸು ಕಾಕಿನಿ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಆಯೋಜಿಸಿತ್ತು. ಇದು ಭಾರತದ ಏಕೈಕ ಸರ್ಟಿಫೈಡ್ ಸ್ಕೈ ಡೈವಿಂಗ್ ಏಜೆನ್ಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.