ಟೆಲ್ ಅವಿವ್: ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆ ಇಸ್ರೇಲ್ ಸೇನೆ ತೀವ್ರಗೊಳಿಸಿದೆ. ಹಮಾಸ್ ಉಗ್ರರ ನಿರ್ಮೂಲನೆ ಪಣತೊಟ್ಟು ಗಾಜಾದ ಮೂಲೆ ಮೂಲೆಯಲ್ಲೂ ಶೋಧ ನಡೆಸುತ್ತಿದ್ದು. ನಿನ್ನೆ ಹಮಾಸ್ ಉಗ್ರ ಸಂಘಟನೆಯ ಮುಖಂಡನ ಮನೆಯನ್ನೇ ಇಸ್ರೇಲ್ ವಾಯುಸೇನೆ ಬಾಂಬ್ ಹಾಕಿ ಉಡಾಯಿಸಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಮಾಸ್ ಪ್ರಮುಖ ಉಗ್ರ, ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೇಹ್ ಎಂಬಾತನ ಮನೆಯನ್ನು ಇಸ್ರೇಲ್ ಸೇನೆಯು ಬಾಂಬಿಟ್ಟು ಧ್ವಂಸಗೊಳಿಸಿದೆ.
“ಇಸ್ರೇಲ್ ಫೈಟರ್ ಜೆಟ್ಗಳು ಇಸ್ಮಾಯಿಲ್ ಹನಿಯೇಹ್ ಮನೆಯನ್ನು ಧ್ವಂಸಗೊಳಿಸಿವೆ” ಎಂದು ವಿಡಿಯೊಗಳ ಸಮೇತ ಇಸ್ರೇಲ್ ಡಿಫೆನ್ಸ್ ಫೋರ್ಸ್ ಪೋಸ್ಟ್ ಮಾಡಿದೆ. ಮನೆ ಧ್ವಂಸಗೊಳಿಸಿದ ಬಳಿಕ ಇಸ್ರೇಲ್ ಸೈನಿಕರು ಆ ಮನೆಯನ್ನು ಶೋಧ ಮಾಡಿದ ವಿಡಿಯೊವನ್ನು ಕೂಡ ಹಂಚಿಕೊಳ್ಳಲಾಗಿದೆ. ಆದರೆ, ಇಸ್ಮಾಯಿಲ್ ಹನಿಯೇಹ್ ಹತ್ಯೆಗೀಡಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಹಮಾಸ್ ಉಗ್ರ ಸಂಘಟನೆಯ ಹಲವು ಮುಖಂಡರನ್ನು ಇಸ್ರೇಲ್ ಹತ್ಯೆಗೈದಿದೆ.
חטיבת האש 215 באוגדה 162 תקפה הלילה באמצעות מטוסי קרב את ביתו של איסמעיל הנייה, ראש הלשכה המדינית של ארגון הטרור חמאס ששימש כתשתית טרור ובין היתר כמקום מפגש עבור בכירי הארגון>> pic.twitter.com/eCwd4lmrFF
— צבא ההגנה לישראל (@idfonline) November 16, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.