
ನವದೆಹಲಿ: ಬ್ರಿಟಿಷರ ಆಳ್ವಿಕೆಯನ್ನು ಕೊನೆಗಾಣಿಸುವ ಚಳವಳಿಯ ನೇತೃತ್ವ ವಹಿಸಿದ್ದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರನ್ನು ನವೆಂಬರ್ 15 ರಂದು ಅವರ ಜನ್ಮದಿನದಂದು ರಾಷ್ಟ್ರವು ನೆನಪಿಸಿಕೊಳ್ಳುತ್ತದೆ. ಅವರ ಗೌರವಾರ್ಥ ಇಂದು ʼಜನಜಾತೀಯ ಗೌರವ ದಿನʼವನ್ನು ಆಚರಿಸಲಾಗುತ್ತಿದೆ.
ನವೆಂಬರ್ 15, 1875ರಂದು ಜನಿಸಿದ ಅವರು ಚೋಟಾ ನಾಗ್ಪುರ ಪ್ರಸ್ಥಭೂಮಿ ಪ್ರದೇಶದ ಮುಂಡಾ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಅವರನ್ನು ಮಾರ್ಚ್ 1900ರಲ್ಲಿ ಬ್ರಿಟಿಷರು ಬಂಧಿಸಿದರು ಮತ್ತು ಅವರು ಜೂನ್ 9, 1900 ರಂದು ರಾಂಚಿ ಜೈಲಿನಲ್ಲಿ ನಿಧನರಾದರು. ಮುಖ್ಯವಾಗಿ, ಬುಡಕಟ್ಟು ಜನಾಂಗದವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವ ಮಿಷನರಿಗಳ ಪ್ರಯತ್ನಗಳ ವಿರುದ್ಧ ಬಿರ್ಸಾ ಮುಂಡಾ ಹೋರಾಡಿದರು ಮತ್ತು ‘ಬಿರ್ಸೇಟ್’ ನಂಬಿಕೆಯನ್ನು ಪ್ರಾರಂಭಿಸಿದರು.
ಬಿರ್ಸಾ ಮುಂಡಾ ಅವರಿಗೆ ಶ್ರದ್ಧಾಂಜಲಿಯಾಗಿ ಮೋದಿ ಸರ್ಕಾರ ನವೆಂಬರ್ 15 ಅನ್ನು ‘ಜನಜಾತೀಯ ಗೌರವ್ ದಿವಸ್’ ಎಂದು ಘೋಷಿಸಿದೆ.
ಇಂದು ಟ್ವಿಟ್ ಮಾಡಿರುವ ಮೋದಿ, “ಭಗವಾನ್ ಬಿರ್ಸಾ ಮುಂಡಾ ಜಿ ಅವರ ಜನ್ಮ ವಾರ್ಷಿಕೋತ್ಸವದಂದು ಗೌರವಪೂರ್ವಕ ನಮನಗಳು. ಬುಡಕಟ್ಟು ಹೆಮ್ಮೆಯ ದಿನದ ಈ ವಿಶೇಷ ಸಂದರ್ಭದಲ್ಲಿ ದೇಶಾದ್ಯಂತ ನನ್ನ ಕುಟುಂಬದ ಸದಸ್ಯರಿಗೆ ಅನಂತ ಶುಭಾಶಯಗಳು” ಎಂದಿದ್ದಾರೆ.
भगवान बिरसा मुंडा जी को उनकी जयंती पर आदरपूर्ण श्रद्धांजलि। देशभर के मेरे परिवारजनों को इस विशेष अवसर से जुड़े जनजातीय गौरव दिवस की ढेरों शुभकामनाएं।
— Narendra Modi (@narendramodi) November 15, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


