ಮಂಗಳೂರು : ಪ್ರಸಿದ್ಧ ಪತ್ರಕಾರ, ಅಂಕಣಕಾರ ಹಾಗೂ ಲೇಖಕರಾದ ಎಂ.ಜೆ.ಅಕ್ಬರ್ರವರು ಸಂತ ಅಲೋಶಿಯಸ್ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಮಂಡಳಿ ಸಭೆಯ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
ಉನ್ನತ ಶಿಕ್ಷಣದ ಬಗ್ಗೆ ವ್ಯಾಖ್ಯಾನಿಸುತ್ತಾ ಶಿಕ್ಷಣದ ನೀತಿ ನಿರೂಪಣೆಗಳು ಯಾವುದೇ ಸರಕಾರದ ಜನಪ್ರಿಯ ಕಾರ್ಯಕ್ರಮದ ಭಾಗವಾಗದೇ ಜ್ಞಾನಾಧಾರಿತ ಸಮಾಜವನ್ನು ಕಟ್ಟುವ ಭಾಗವಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಪಶ್ಚಿಮದ ಕ್ರೈಸ್ತ ಮಿಶನರಿಗಳು ದಕ್ಷಿಣ-ಪೂರ್ವಏಶಿಯಾದ ಇತರ ದೇಶಗಳಿಗಿಂತ ಭಾರತದಲ್ಲಿ ನೀಡಿರುವ ಕೊಡುಗೆಗಳನ್ನು ಚರಿತ್ರಾರ್ಹ ಎಂದು ಬಣ್ಣಿಸಿ ಶ್ಲಾಘಿಸಿದರು. ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್, ಪ್ರಸಿದ್ಧ ಲೇಖಕ ಶ್ರೀ ಅರವಿಂದ ಅಡಿಗ ರಂತಹ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಜೊತೆ ತಮ್ಮ ಒಡನಾಟಗಳನ್ನು ಸ್ಮರಿಸುತ್ತಾ, ಸಂತ ಅಲೋಶಿಯಸ್ ಕಾಲೇಜು ಸಮಾಜಕ್ಕೆ ನೀಡಿರುವ ಮಹತ್ತರ ಕೊಡುಗೆಗಳನ್ನು ಪ್ರಶಂಸಿದರು.
ಪ್ರಾಂಶುಪಾಲ ರೆ.ಫಾ.ಸ್ವೀಬರ್ಟ್ ಡಿಸಿಲ್ವಾ ಸ್ವಾಗತಿಸಿದರು. ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ರೆ.ಫಾ.ಡೆಂಜಿಲ್ ಲೋಬೊ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.