ನವದೆಹಲಿ: ಪಾಕಿಸ್ತಾನದ ಮಾಜಿ ಸ್ಪಿನ್ನರ್ ಮತ್ತು ಹಿಂದೂ ಧರ್ಮೀಯ ಡ್ಯಾನಿಶ್ ಕನೇರಿಯಾ ಅವರು ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನನ್ನ ಧರ್ಮವನ್ನು ಇಸ್ಲಾಂಗೆ ಪರಿವರ್ತಿಸಲು ಶಾಹಿದ್ ಅಫ್ರಿದಿ ಸಾಕಷ್ಟು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಇಂಜಮಾಮ್-ಉಲ್-ಹಕ್ ನನ್ನನ್ನು ಬೆಂಬಲಿಸಿದ ಏಕೈಕ ಪಾಕಿಸ್ತಾನದ ನಾಯಕ ಮತ್ತು ಉಳಿದ ಹೆಚ್ಚಿನವರು ತನಗೆ ಸಾಕಷ್ಟು ತೊಂದರೆಗಳನ್ನು ನೀಡಿದ್ದಾರೆ ಎಂದು 42 ವರ್ಷ ವಯಸ್ಸಿನ ಕನೇರಿಯಾ ಹೇಳಿದ್ದಾರೆ.
2000ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಕನೇರಿಯಾ, ಪಾಕಿಸ್ತಾನದ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಆಗಿ ತಮ್ಮ ವೃತ್ತಿಜೀವನವನ್ನು ಮುಗಿಸಿದರು. 61 ಟೆಸ್ಟ್ಗಳಲ್ಲಿ ಮಹತ್ವದ ಸಾಧನೆ ಮಾಡಿದರೂ ಅವರ ವೃತ್ತಿಜೀವನವು ವಿವಾದಗಳಿಂದ ನಾಶವಾಯಿತು. ಧರ್ಮದ ಕಾರಣಕ್ಕಾಗಿಯೇ ಅವರನ್ನು ಪಾಕಿಸ್ಥಾನದಲ್ಲಿ ಮೂಲೆಗುಂಪು ಮಾಡಲಾಯಿತು.
“ಧರ್ಮದ ವಿಷಯಕ್ಕೆ ಬಂದರೆ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ. ನನಗೆ ಸನಾತನ ಧರ್ಮವೇ ಎಲ್ಲಾ” ಎಂದು ಡ್ಯಾನಿಶ್ ಕನೇರಿಯಾ ಈಗಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
“ನಾನು ನನ್ನ ವೃತ್ತಿಜೀವನದಲ್ಲಿ ಉತ್ತಮವಾಗಿ ಆಡುತ್ತಿದ್ದೆ ಮತ್ತು ಕೌಂಟಿ ಕ್ರಿಕೆಟ್ನಲ್ಲಿಯೂ ಆಡುತ್ತಿದ್ದೆ. ಇಂಜಮಾಮ್-ಉಲ್-ಹಕ್ ನನಗೆ ಸಾಕಷ್ಟು ಬೆಂಬಲ ನೀಡಿದರು ಮತ್ತು ಅವರು ನನಗೆ ಬೆಂಬಲ ನೀಡಿದ ಏಕೈಕ ನಾಯಕ. ಅವರ ಜೊತೆಗೆ, ಶೋಯೆಬ್ ಅಖ್ತರ್ ಕೂಡ ಬೆಂಬಲಿಸಿದ್ದಾರೆ. ಶಾಹಿದ್ ಅಫ್ರಿದಿ ಮತ್ತು ಇತರ ಪಾಕಿಸ್ತಾನದ ಅನೇಕ ಆಟಗಾರರು ನನಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಮತ್ತು ನನ್ನೊಂದಿಗೆ ಊಟ ಕೂಡ ಮಾಡುತ್ತಿರಲಿಲ್ಲ.ಅವರು ಮತಾಂತರದ ಬಗ್ಗೆ ಮಾತನಾಡುತ್ತಿದ್ದರು, ಆದರೆ ನನ್ನ ಧರ್ಮವೇ ನನಗೆ ಸರ್ವಸ್ವ.ಶಾಹಿದ್ ಅಫ್ರಿದಿ ನನಗೆ ಮತಾಂತರವಾಗಲು ಹೇಳಿ ಪ್ರಮುಖ ವ್ಯಕ್ತಿ ಮತ್ತು ಬಹಳಷ್ಟು ಬಾರಿ ಹಾಗೆ ಮಾಡಿದರು.ಇಂಜಮಾಮ್-ಉಲ್-ಹಕ್ ಎಂದಿಗೂ ಹಾಗೆ ಮಾತನಾಡಲಿಲ್ಲ” ಎಂದಿದ್ದಾರೆ.
Never compromise when it comes to Dharma! https://t.co/PfioXpNcM5
— Danish Kaneria (@DanishKaneria61) October 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.