ನವದೆಹಲಿ: ಚೀನಾದ ಹ್ಯಾಂಗ್ಝೌ ಒಲಿಂಪಿಕ್ ಸ್ಪೋರ್ಟ್ಸ್ ಎಕ್ಸ್ಪೋ ಸೆಂಟರ್ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ದೊರೆತಿದೆ. ಪ್ಯಾರಾ ಕೆನೋಯಿಂಗ್ ಮಹಿಳೆಯರ VL2 ಫೈನಲ್ನಲ್ಲಿ ಪ್ರಾಚಿ ಯಾದವ್ ಬೆಳ್ಳಿ ಪದಕ ಜಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಪ್ರಾಚಿ ಯಾದವ್ ಅವರಿಗೆ ಅಭಿನಂದನೆಗಳನ್ನ ಸಲ್ಲಿಸಿದ್ದು, ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಮೊದಲ ಪದಕವನ್ನು ಗಳಿಸುವ ಮೂಲಕ ಪ್ರಾಚಿ ಯಾದವ್ ಭಾರತೀಯ ಕ್ರೀಡಾ ಇತಿಹಾಸದಲ್ಲಿ ತನ್ನ ಹೆಸರನ್ನು ಬರೆದಿದ್ದಾರೆ. ಪ್ಯಾರಾ ಕೆನೋಯಿಂಗ್ ಮಹಿಳೆಯರ VL2 ಫೈನಲ್ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ ಅವರಿಗೆ ಅಭಿನಂದನೆಗಳು. ಆಕೆಯ ಅದ್ಭುತ ಪ್ರದರ್ಶನವು ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್ ಆರಂಭಕ್ಕೂ ಮೊದಲು ಇಡೀ ಭಾರತೀಯ ತಂಡಕ್ಕೆ ಮೋದಿ ಶುಭಾಶಯಗಳನ್ನು ಕೋರಿ ಟ್ವಿಟ್ ಮಾಡಿದ್ದರು. ” ಭಾರತವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರೀಡಾಪಟುವು ಸ್ಪೂರ್ತಿದಾಯಕ ಜೀವನ ಪಯಣವನ್ನು ಹೊಂದಿದ್ದಾರೆ. ಭಾರತೀಯ ಕ್ರೀಡಾಸ್ಫೂರ್ತಿಯ ನಿಜವಾದ ಸಾರವನ್ನು ಅವರು ತೋರಿಸುತ್ತಾರೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.
Prachi Yadav etches her name in the history of Indian sports by securing the first medal at the Asian Para Games.
Congratulations to @ItzPrachi_ on winning the remarkable Silver medal win in the Para Canoeing Women’s VL2 final.
Her incredible performance has made the entire… pic.twitter.com/6ZdXEAS1U0
— Narendra Modi (@narendramodi) October 23, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.