ನವದೆಹಲಿ: ಖ್ಯಾತ ಆಧ್ಯಾತ್ಮಿಕ ಗುರು ಬಂಗಾರು ಅಡಿಗಲಾರ್ ಅವರು ನಿಧನರಾಗಿದ್ದು, ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
82 ವರ್ಷದ ಅಡಿಗಲಾರ್ ಅವರು ಚೆನ್ನೈ ಸಮೀಪದ ಮೇಲ್ಮರುವತ್ತೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಶಕ್ತಿ ದೇವಾಲಯಗಳ ಗರ್ಭಗುಡಿಗೆ ಮಹಿಳೆಯರು ಪ್ರವೇಶಿಸಲು ಅವಕಾಶ ಮಾಡಿಕೊಡುವಂತಹ ಕ್ರಾಂತಿಕಾರಿ ಸುಧಾರಣೆಗಳನ್ನು ತಂದಿದ್ದ ಆಧ್ಯಾತ್ಮಿಕ ಗುರು ಬಂಗಾರು ಅಡಿಗಲಾರ್ ಅವರು ‘ಅಮ್ಮ’ ಎಂದೇ ಖ್ಯಾತಿ ಪಡೆದಿದ್ದರು. ಅಡಿಗಲಾರ್ ಅವರು ಮಹಿಳೆಯರು ಮುಟ್ಟಿನ ಸಮಯದಲ್ಲಿಯೂ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು.
ಶಕ್ತಿ ಆರಾಧನೆಯ ಗುರುತಾಗಿ ಕೆಂಪು ವಸ್ತ್ರಗಳನ್ನು ಬಳಸುವ ಅವರ ಭಕ್ತರು ಅವರನ್ನು ‘ಅಮ್ಮ’ ಎಂದು ಪೂಜಿಸುತ್ತಾರೆ. ಪ್ರಧಾನಿ ಮೋದಿ ಅವರು ಕೂಡ ಅಡಿಗಲಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಡಿಗಲಾರ್ ಅವರಿಗೆ ಅವರ ಆಧ್ಯಾತ್ಮಿಕ ಸೇವೆಯನ್ನು ಗುರುತಿಸಿ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮೋದಿ ಬಂಗಾರು ಅಡಿಗಲಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವಿಟ್ ಮಾಡಿದ್ದು, “ಶ್ರೀ ಬಂಗಾರು ಅಡಿಗರು ಅವರ ನಿಧನದಿಂದ ತೀವ್ರ ದುಃಖವಾಗಿದೆ. ಆಧ್ಯಾತ್ಮಿಕತೆ ಮತ್ತು ಸಹಾನುಭೂತಿಯಿಂದ ಸಮೃದ್ಧವಾಗಿರುವ ಅವರ ಜೀವನವು ಶಾಶ್ವತವಾಗಿ ಅನೇಕರಿಗೆ ಮಾರ್ಗದರ್ಶಕ ಬೆಳಕಾಗಿದೆ. ಮಾನವೀಯತೆಗೆ ತಮ್ಮ ದಣಿವರಿಯದ ಸೇವೆ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಅವರು ಅನೇಕರ ಜೀವನದಲ್ಲಿ ಭರವಸೆ ಮತ್ತು ಜ್ಞಾನದ ಬೀಜಗಳನ್ನು ಬಿತ್ತಿದರು. ಅವರ ಕೆಲಸವು ಪೀಳಿಗೆಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದಿದ್ದಾರೆ.
Deeply saddened by the demise of Shri Bangaru Adigalar Ji. His life, rich in spirituality and compassion, will forever be a guiding light for many. Through his tireless service to humanity and emphasis on education, he sowed the seeds of hope and knowledge in the lives of many.… pic.twitter.com/J42xo42Kxc
— Narendra Modi (@narendramodi) October 19, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.