ನವದೆಹಲಿ: ಇಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ಮಹಾತ್ಮಾ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಜೈಶಂಕರ್ ಅವರು, ಸಂಘರ್ಷ ಮತ್ತು ಹಿಂಸಾಚಾರದಿಂದ ಸುತ್ತುವರಿದಿರುವ ಇಂದಿನ ಜಗತ್ತಿನಲ್ಲಿ ರಾಜತಾಂತ್ರಿಕತೆಯ ಪ್ರೇರಕರಾಗಿ ಮಹಾತ್ಮ ಗಾಂಧಿ ಶಕ್ತಿ ನೀಡುತ್ತಿದ್ದಾಎಂದು ಹೇಳಿದರು.
ಸತ್ಯ, ಅಹಿಂಸೆ ಮತ್ತು ಜನರ ಸ್ವಾತಂತ್ರ್ಯ ಮತ್ತು ಹಕ್ಕಿಗಾಗಿ ಮಹಾತ್ಮ ಗಾಂಧಿಯವರ ಕೊಡುಗೆಗಳನ್ನು ಸ್ಮರಿಸಲು ವಿಶ್ವಸಂಸ್ಥೆಯು ಅವರ ಜನ್ಮದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನ ಎಂದು ಘೋಷಿಸುವ ಮೂಲಕ ಗುರುತಿಸಿದೆ ಎಂದು ಅವರು ಹೇಳಿದರು.
ಪ್ರತಿಮೆಯ ಅನಾವರಣವು ಭಾರತ ಮತ್ತು ವಿಯೆಟ್ನಾಂ ನಡುವಿನ ಸ್ನೇಹಕ್ಕಾಗಿ ಸಾಂಕೇತಿಕ ಕ್ಷಣವಾಗಿದೆ ಮತ್ತು ಸ್ವಾತಂತ್ರ್ಯ, ಸ್ವಾವಲಂಬನೆ ಮತ್ತು ಮಾನವ ಘನತೆಯ ಸಂದೇಶವನ್ನು ಒತ್ತಿಹೇಳುತ್ತದೆ ಎಂದು ವಿದೇಶಾಂಗ ಸಚಿವರು ಹೇಳಿದರು.
ಡಾ. ಜೈಶಂಕರ್ ಹೋ ಚಿ ಮಿನ್ಹ್ ಸಿಟಿ ಪಕ್ಷದ ಕಾರ್ಯದರ್ಶಿ ನ್ಗುಯೆನ್ ವಾನ್ ನೆನ್ ಅವರನ್ನು ಭೇಟಿಯಾದರು. ಭಾರತ-ವಿಯೆಟ್ನಾಂ ಪಾಲುದಾರಿಕೆಗೆ ಹೊ ಚಿ ಮಿನ್ಹ್ ನಗರದ ಕೊಡುಗೆಯನ್ನು ಅವರು ಶ್ಲಾಘಿಸಿದರು.
ವಿದೇಶಾಂಗ ಸಚಿವರು ವಿಯೆಟ್ನಾಂಗೆ ನಾಲ್ಕು ದಿನಗಳ ಅಧಿಕೃತ ಭೇಟಿಯಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.