ನವದೆಹಲಿ: ಪ್ರವಾಹ ಪೀಡಿತ ಸಿಕ್ಕಿಂನಿಂದ ಜನರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಮಂಗನ್ ಜಿಲ್ಲೆಯ ಉತ್ತರ ಸಿಕ್ಕಿಂನ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸ್ಥಳಾಂತರಿಸುವ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದ್ದು, ಮಂಗಳವಾರ ಎರಡು MI-17 ಹೆಲಿಕಾಪ್ಟರ್ಗಳು, ಎರಡು ಚಿನೂಕ್ ಹೆಲಿಕಾಪ್ಟರ್ಗಳು ಮತ್ತು ಒಂದು ಚೀತಾ ಹೆಲಿಕಾಪ್ಟರ್ಗಳು ಭಾರತೀಯ ವಾಯುಪಡೆಯಿಂದ ನಿಯೋಜಿಸಲ್ಪಟ್ಟಿದೆ. ಇದರ ಮೂಲಕ 176 ಸಿಕ್ಕಿಬಿದ್ದ ವ್ಯಕ್ತಿಗಳನ್ನು ಮತ್ತು ಒಬ್ಬ ಗಾಯಾಳುವನ್ನು ಸ್ಥಳಾಂತರಿಸಲಾಯಿತು.
ಸೇನೆಯು ಲಾಚೆನ್, ಲಾಚುಂಗ್ ಮತ್ತು ಚುಂಗ್ಥಾಂಗ್ನ ನಾಗರಿಕರಿಗೆ ಪೂರೈಸಲು ಸುಮಾರು 35 ಟನ್ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಕೂಡ ಕಳುಹಿಸಲಾಗಿದೆ.
ವಾಯು ಸ್ಥಳಾಂತರದ ಜೊತೆಗೆ, ಚುಂಗ್ಥಾಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಲುಕಿರುವ 1200 ಕ್ಕೂ ಹೆಚ್ಚು ಜನರನ್ನು ಸೇನೆ, ITBP ಮತ್ತು ಸ್ವಯಂಸೇವಕರು ನಿರ್ಮಿಸಿದ ಕಾಲು ಸೇತುವೆಯ ಮೂಲಕ ಸ್ಥಳಾಂತರಿಸಲಾಯಿತು.
ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಕ್ಕಿಂನ ಟ್ರಾವೆಲ್ಸ್ ಏಜೆಂಟ್ಸ್ ಅಸೋಸಿಯೇಷನ್ ದಾಖಲೆಗಳನ್ನು ನಿರ್ವಹಿಸುವುದು, ದಾಖಲೀಕರಣ ಮಾಡುವುದು, ಸ್ಥಳಾಂತರಿಸುವವರಿಗೆ ನೆರವು ನೀಡುವ ಮೂಲಕ ಮತ್ತು ಹೆಲಿಕಾಪ್ಟರ್ಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಲೋಡ್ ಮಾಡುವ ಮೂಲಕ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಿದ್ದಾರೆ.
ಪ್ರತ್ಯೇಕವಾಗಿ, ಅಂತರ-ಸಚಿವಾಲಯದ ಕೇಂದ್ರ ತಂಡವು ಉತ್ತರ ಸಿಕ್ಕಿಂನ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯನ್ನು ನಿರ್ಣಯಿಸಲು ಮತ್ತು ಅಲ್ಪಾವಧಿಯ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.