ಜೆರುಸಲೇಂ: ಹಮಾಸ್ನೊಂದಿಗಿನ ಇಸ್ರೇಲ್ ರಣಭೀಕರ ಕದನದಲ್ಲಿ ತೊಡಗಿಕೊಂಡಿದೆ. ಹೆಣಗಳ ರಾಶಿಯೇ ಅಲ್ಲಿ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಇಸ್ರೇಲ್ನ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಯುದ್ಧಭೂಮಿಯಲ್ಲಿ ಸೈನಿಕರನ್ನು ಸೇರಿಕೊಂಡು ಹೋರಾಟಕ್ಕೆ ಇಳಿದಿದ್ದಾರೆ.
ನಫ್ತಾಲಿ ಬೆನೆಟ್ ಅವರು ದೇಶಕ್ಕಾಗಿ ಹೋರಾಡುವ ಕರ್ತವ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಸ್ರೇಲಿ ಸೈನಿಕರೊಂದಿಗೆ ಹಸ್ತಲಾಘವ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಶನಿವಾರ ಪ್ಯಾಲೆಸ್ತೀನ್ ಗುಂಪು ನಡೆಸಿದ ಹಠಾತ್ ದಾಳಿಯ ನಂತರ ಇಸ್ರೇಲ್ ಹಮಾಸ್ ವಿರುದ್ಧ ಬೃಹತ್ ಪ್ರತಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಪ್ಯಾಲೇಸ್ಟಿನಿಯನ್ ಗುಂಪನ್ನು ಸೋಲಿಸಲು ಪ್ರತಿಜ್ಞೆ ಮಾಡಿದ ನಂತರ ಇಸ್ರೇಲ್ ಗಾಜಾ ಪಟ್ಟಿಯ ಬಳಿ ಹತ್ತು ಸಾವಿರ ಸೈನಿಕರನ್ನು ಒಟ್ಟುಗೂಡಿಸಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ತಾಣಗಳಿಂದ ದೂರ ಹೋಗುವಂತೆ ಎಲ್ಲಾ ಗಾಜಾ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಗಾಜಾವನ್ನು ಅವಶೇಷಗಳಾಗಿ ಪರಿವರ್ತಿಸಲಾಗುವುದು ಎಂದು ಹೇಳಿದ್ದಾರೆ.
ದಶಕಗಳಲ್ಲೇ ಅತಿದೊಡ್ಡ ಸಂಘರ್ಷದ ರಕ್ತಸಿಕ್ತ ಹೋರಾಟವು ಹಮಾಸ್ ಬೃಹತ್ ರಾಕೆಟ್ ಬ್ಯಾರೇಜ್ ಮತ್ತು ನೆಲ, ವಾಯು ಮತ್ತು ಸಮುದ್ರದ ಮೂಲಕ ಇಸ್ರೇಲ್ ಮೂಲಕ ಆಕ್ರಮಣವನ್ನು ನಡೆಸಿದ ತರುವಾಯ ಆರಂಭಗೊಂಡಿತು.
ಹಮಾಸ್ ಗುಂಪು ತನ್ನ ದಾಳಿಯನ್ನು “ಆಪರೇಷನ್ ಅಲ್-ಅಕ್ಸಾ ಫ್ಲಡ್” ಎಂದು ಹೆಸರಿಸಿದೆ. ಅಲ್ಲದೇ ಪಶ್ಚಿಮ ದಂಡೆಯಲ್ಲಿನ ಪ್ರತಿರೋಧ ಹೋರಾಟಕ್ಕೆ ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳು ಸೇರಬೇಕು ಎಂದು ಕರೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.