ಸಾನ್ ಜೋಸ್: ’ಇಡೀ ವಿಶ್ವದಲ್ಲೇ ಭಾರತ ಶೀಘ್ರದಲ್ಲಿ ಬೆಳೆಯುತ್ತಿರುವ ಪ್ರಾರಂಭಿಕ ರಾಷ್ಟ್ರ’ ಎಂದು ಗೂಗಲ್ ಸಿಇಓ ಸುಂದರ್ ಪಿಚೈಯವರು ವ್ಯಾಖ್ಯಾನಿಸಿದ್ದಾರೆ.
ಭಾರತವನ್ನು ಮುಂದಿನ ಅನ್ವೇಷಣೆಗಳ ಚಾಲಕನನ್ನಾಗಿಸಲು ಪ್ರಧಾನಿ ನರೇಂದ್ರ ಮೊದಿಯವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಏನು ನಡೆಯುತ್ತಿದ್ದೆಯೋ ಅದರ ಬಗ್ಗೆ ನಮಗೆ ಹೆಮ್ಮೆ ಇದೆ. ಮೋದಿಯ ಡಿಜಿಟಲ್ ಇಂಡಿಯಾ ಗುರಿಯನ್ನು ನಾವೂ ಹಂಚಿಕೊಳ್ಳಲಿದ್ದೇವೆ ಎಂದಿದ್ದಾರೆ.
’ಗೂಗಲ್ ಭಾರತದ 500 ರೈಲು ನಿಲ್ದಾಣಗಳಲ್ಲಿ ಶೀಘ್ರ ಉಚಿತ ವೈಫೈ ಸೇವೆ ಆರಂಭಿಸಲಿದೆ. ಗುಜರಾತಿ ಸೇರಿ ಹತ್ತು ಭಾರತೀಯ ಭಾಷೆಗಳಲ್ಲಿ ಟೈಪಿಸಲು ಅನುಕೂಲವಾಗುವ ಗೂಗಲ್ ತಂತ್ರಾಂಶ ಮುಂದಿನ ತಿಂಗಳಿನಿಂದ ಲಭ್ಯವಾಗಲಿದೆ ಎಂದರು.
ಗೂಗಲ್ನೊಂದಿಗೆ ಭಾರತದ ಸಹಕಾರದ ಬಗ್ಗೆ ಮಾತನಾಡಿದ ಮೋದಿ, ’ನಾವು ನಮ್ಮ ಸಾರ್ವಜನಿಕ ವೈಫೈ ಹಾಟ್ಸ್ಪಾಟ್ಗಳನ್ನು ವಿಸ್ತರಿಸುತ್ತಿದ್ದೇವೆ. ಉದಾಹರಣೆಗೆ, ಉಚಿತ ವೈಫೈಗಳು ಕೇವಲ ವಿಮಾನನಿಲ್ದಾಣದಲ್ಲಿ ಮಾತ್ರವಲ್ಲದೇ ರೈಲ್ವೇ ಸ್ಟೇಶನ್ನಿನಲ್ಲೂ ಇರುವಂತೆ ನೋಡಿಕೊಳ್ಳುತ್ತಿದ್ದೇವೆ. ಅದಕ್ಕಾಗಿ ಗೂಗಲ್ನೊಂದಿಗೆ ಕೈಜೋಡಿಸುತ್ತೇವೆ, 500 ರೈಲ್ವೇ ಸ್ಟೇಶನ್ಗಳನ್ನು ಶೀಘ್ರದಲ್ಲೇ ಕವರ್ ಮಾಡುತ್ತೇವೆ’ ಎಂದರು.
ಸಿಲಿಕಾನ್ ವ್ಯಾಲಿಗೆ ಭಾನುವಾರ ಬೆಳಿಗ್ಗೆ ತೆರಳಿದ್ದ ಮೋದಿ ಅಲ್ಲಿ ಸುಂದರ್ ಪಿಚೈ ಅವರೊಂದಿಗೆ ಮಾತುಕತೆ ನಡೆಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.