ಬೆಳ್ತಂಗಡಿ : ಹಿಂದೂಗಳು ಹೆದರುವವರಲ್ಲ, ಹೆದರಿಸುವುದೂ ಇಲ್ಲ. ಆದರೆ ಹೆದರಿಸುವವರಿಗೆ ಮಾತ್ರ ದಿಟ್ಟ ಉತ್ತರ ನೀಡಲು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಸದಾ ಕಟೀಬದ್ಧವಾಗಿದೆ ಎಂದು ಬಜರಂಗದಳ ಪ್ರಾಂತ್ಯ ಸಹ ಸಂಯೋಜಕ ಶರಣ್ ಪಂಪ್ವೆಲ್ ಎಚ್ಚರಿಸಿದ್ದಾರೆ.
ಅವರು ಭಾನುವಾರ ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದ ಪ್ರಯುಕ್ತ ವೇಣೂರು ಪ್ರಖಂಡದ ಬಳಂಜ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಭಗವದ್ಗೀತಾ ಪುಸ್ತಕ ಅಭಿಯಾನ ಮತ್ತು ವನಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸಂಪೂರ್ಣ ಪ್ರಪಂಚವನ್ನು ಒಂದುಗೂಡಿಸಲು ಶಕ್ತಿಯಿರುವ ದೇಶವೆಂದರೆ ಭಾರತ. ಈ ದೇಶದ ಪ್ರತಿಯೊಂದು ಜೀವಿ, ವಸ್ತು ಇರುವುದೇ ಪರೋಪಕಾರಕ್ಕಾಗಿ.
ಹಿಂದುಗಳು ಈ ದೇಶದಲ್ಲಿ ಮುಸ್ಲೀಮರನ್ನು, ಕ್ರಿಶ್ಚಿಯನ್ನರನ್ನು ಸ್ವೀಕಾರ ಮಾಡಿದ್ದಾರೆ. ಮಸೀದಿ, ಚರ್ಚ್ ನಿರ್ಮಿಸಲು ಅವಕಾಶನೀಡಿದ್ದಾರೆ. ಇದು ಸಾಧ್ಯವಾದದ್ದು ಸರ್ವೇ ಜನಾ ಸುಖಿನೋ ಭವಂತು ಎಂಬ ನೆಲೆಯಲ್ಲಿ. ಆದರೆ ಅದೇ ಜನಾಂಗ ಇಂದು ಹಿಂದು ಸಮಾಜವನ್ನು ನಾಶ ಮಾಡಲು ಪ್ರಾರಂಭಿಸಿದ್ದಾರೆ. ಅವಕಾಶ ಕೊಟ್ಟವರನ್ನೇ ಮುಗಿಸಲು ಲವ್ ಜಿಹಾದ್, ಗೋಹತ್ಯೆ, ಮತಾಂತರ, ಭಯೋತ್ಪಾದನೆ ಮೊದಲಾದ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ ಎಂದ ಅವರು ಇಂದು ಮಕ್ಕಳಿಗೆ ಪಾಠಪುಸ್ತಕಗಳಲ್ಲಿ ಕ್ರಿಸ್ತ ಪೂರ್ವದಇತಿಹಾಸವನ್ನು ತಿಳಿಸುವ ವ್ಯವಸ್ಥೆಯೇ ಇಲ್ಲದಿರುವ ಬಗ್ಗೆ ವಿಷಾದಿಸಿದರು.
ಗೋರಕ್ಷಣೆಗಾಗಿ ಕೆಲಸ ಮಾಡುತ್ತಿದ್ದರೆಅದು ಬಜರಂಗದಳ ಮಾತ್ರ. ಇದಕ್ಕಾಗಿ ಕಾರ್ಯಕರ್ತರು ಜೈಲಿಗೂ ಹೋಗಿ ಬಂದಿದ್ದಾರೆ.ಇಂದು ನಾವು ಧೈರ್ಯವಾಗಿ ಹಿಂದೂ ಅಂತ ಹೇಳಿ ಕೊಳ್ಳಲು ಕಾರಣವಾಗಿರುವುದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಹಿಂದೂ ಸಮಾಜ ಒಂದಾದರೆ ಏನಾದೀತು ಎಂಬುದಕ್ಕೆ ಸ್ಪಷ್ಟ ಉದಾಹರಣೆ ರಾಮಜನ್ಮ ಭೂಮಿ ಹೋರಾಟ ಮತ್ತು 2014ರ ಲೋಕಸಭಾ ಚುನಾವಣೆ ಎಂದ ಅವರು ಹಿಂದುತ್ವದಲ್ಲಿ ರಾಜಿ, ಹೊಂದಾಣಿಕೆ ಎಂದೂ ಮಾಡಬಾರದು ಎಂದರು.
ಅಧ್ಯಕ್ಷತೆಯನ್ನು ಅಳದಂಗಡಿ ಶ್ರೀ ಸತ್ಯದೇವತಾ ದೇವಸ್ಥಾನದ ಮೊಕ್ತೇಸರ ಶಿವಪ್ರಸಾದ್ ಅಜಿಲ ವಹಿಸಿದ್ದರು. ವೇದಿಕೆಯಲ್ಲಿ ವಿ.ಹಿಂ.ಪ.ದ ಪುತ್ತೂರು ಜಿಲ್ಲಾಧ್ಯಕ್ಷ ಡೀಕಯ್ಯ ಪೆರುವೋಡಿ, ಪರಿಷತ್ ಸುವರ್ಣ ಮಹೋತ್ಸವ ಸಮಿತಿ ಜಿಲ್ಲಾ ಸದಸ್ಯರತ್ನಾಕರ ರಾವ್ ಹೊಳೆಹೊದ್ದು, ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಶೀತಲ್ ಪಡಿವಾಳ್ ಉಪಸ್ಥಿತರಿದ್ದರು.
ಈ ಸಂದರ್ಭ ಅತಿಥಿಗಳು ದೇಗುಲ ಪರಿಸರದಲ್ಲಿ ಗಿಡನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಪ್ರತಿಯೊಂದು ಮನೆಗೊಂದರಂತೆ ಭಗವದ್ದೀತಾ ಪುಸ್ತಕಗಳನ್ನು ವಿತರಿಸಲಾಯಿತು.
ಪ್ರಖಂಡದ ಅಧ್ಯಕ್ಷ ಶಶಾಂಕ್ ಭಟ್ ಸ್ವಾಗತಿಸಿದರು. ರತ್ನಾಕರ ಶೆಟ್ಟಿ ವೈಯಕ್ತಿಕ ಗೀತೆ ಹಾಡಿದರು. ಪರಿಷತ್ ಬಳೆಂಜ ಘಟಕದ ಕಾರ್ಯದರ್ಶಿ ರಾಘವೇಂದ್ರ ಭಟ್ ಧ್ವಜ ವಂದನೆ ನೆರವೇರಿಸಿ ವಂದಿಸಿದರು.ಹರೀಶ್ದೇವಾಡಿಗಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.